ದೇಶದಲ್ಲಿ ಹೊಸದಾಗಿ 1,72 ಲಕ್ಷ ಕೊರೊನಾ ಪ್ರಕರಣಗಳು ಪತ್ತೆ Saaksha Tv
ನವದೆಹಲಿ; ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 1,72,433 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟ್ವೀಟ್ ಮಾಡಿದೆ.
ಇನ್ನೂ ದೇಶದಲ್ಲಿ ಪ್ರತಿದಿನದ ಕೊರೊನಾ ಸೋಂಕಿತರ ಪ್ರಮಾಣವು 10.99 ರಷ್ಟಿದ್ದು, ವಾರದ ಏರಿಕೆ ಪ್ರಮಾಣವು 12.98 ರಷ್ಟಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ 15,33,921 ಲಕ್ಷ ಇದ್ದು, ಸಕ್ರೀಯ ಪ್ರಮಾಣ ಶೇ 3.67 ರಷ್ಟಿದೆ. ಕಳೆದ 24 ಗಂಟೆಯಲ್ಲಿ 2,59,107 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಣವು ಶೇ 95.14 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೆ ಕಳೆದ 24 ಗಂಟೆಯಲ್ಲಿ 1,008 ಜನರು ಸಾವನ್ನಪ್ಪಿದ್ದಾರೆ. ಹಾಗೇ ಕಳೆದ 24 ಗಂಟೆಯಲ್ಲಿ 15,69,449 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗು 167.87 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ. ಕೊರೊನಾ ಸೋಂಕಿನ ಪ್ರಮಾಣವು ನಿನ್ನೆಗಿಂತ 6.8 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.