ದೇಶದಲ್ಲಿ 2,35 ಲಕ್ಷ ಕೊರೊನಾ ಹೊಸ ಪ್ರಕರಣಗಳು ಪತ್ತೆ Saaksha Tv
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,35,532 ಲಕ್ಷ ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಯ ಟ್ವೀಟ್ ಮಾಡಿದೆ.
ಕೊರೊನಾ ಪ್ರತಿದಿನದ ಏರಿಕೆ ಪ್ರಮಾವು 13.39 ರಷ್ಟಿದೆ. ವಾರದ ಏರಿಕೆ ಪ್ರಮಾಣವು 16.89 ರಷ್ಟಿದೆ. ಇನ್ನೂ ಸಕ್ರೀಯ ಪ್ರಕರಣಗಳು 20,04,333 ಲಕ್ಷ ಇದ್ದು, ಇದರ ಪ್ರಮಾಣ ಶೇ 4.91 ರಷ್ಟಿದೆ. ಕಳೆದ 24 ಗಂಟೆಯಲ್ಲಿ 871 ಜನ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ ಚೇತರಿಸಿಕೊಂಡವರು 3,35,939 ಲಕ್ಷ ಜನರು. ಚೇತರಿಕೆ ಪ್ರಮಾಣವು 93.89 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಇನ್ನೂ ಕಳೆದ 24 ಗಂಟೆಯಲ್ಲಿ 17,59,434 ಲಕ್ಷ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಹಾಗೇ 165.04 ಕೋಟಿ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದೆ.