ದೆಹಲಿಯಲ್ಲಿ ಪ್ರತಿದಿನ 20ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ
ನವದೆಹಲಿ : ಕೊರೊನಾ ವೈರಸ್ ಕಾಟದ ಮಧ್ಯೆ ದೆಹಲಿಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಪ್ರತಿದಿನ 20ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳ ದಾಖಲಾಗುತ್ತಿದೆ ಎಂದು ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಂ.ವಿ. ಪದ್ಮ ಶ್ರೀವಾಸ್ತವರವರು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಇಮ್ಯುನೊಕಾಂಪ್ರೊಮೈಸ್ಡ್, ಡಯಾಬಿಟಿಸ್, ಹೈ ಸ್ಟೀರಾಯ್ಡ್ ಡೋಸ್ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಮುನ್ನ ಇಷ್ಟು ಸಂಖ್ಯೆಯಲ್ಲಿ ಎಂದಿಗೂ ಇರಲಿಲ್ಲ.
ಕೇವಲ ಬೆರಳೆಣಿಕೆಯಷ್ಟಿತ್ತು. ಆದರೆ ಈಗ ಬ್ಲ್ಯಾಕ್ ಫಂಗಸ್ ರೋಗದ ಮಿತಿ ಮೀರುತ್ತಿದ್ದು, ಪ್ರತಿನಿತ್ಯ 20ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗುತ್ತಿದೆ.
ಈ ಕಾಯಿಲೆಗೆ ನಾವು ಏಮ್ಸ್ ಟ್ರಾಮಾ ಸೆಂಟರ್ ಮತ್ತು ಏಮ್ಸ್ ಜಾಜ್ಜರ್ ಎಂದು ಪ್ರತ್ಯೇಕ ವಾರ್ಡ್ ಗಳನ್ನು ನಿರ್ಮಿಸಿದ್ದೇವೆ ಬ್ಲ್ಯಾಕ್ ಫಂಗಸ್ ಎಂದಿದ್ದಾರೆ.
ದೇಶಾದ್ಯಂತ ಮ್ಯಾಕ್ಸ್ ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಬ್ಯ್ಲಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 25 ಮಂದಿಗೆ ಬ್ಯ್ಲಾಕ್ ಫಂಗಸ್ ಕಾಣಿಸಿಕೊಂಡಿದೆ.