ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಕಿರಾತಕದಲ್ಲಿ ಹೈಸ್ಕೂಲ್ ಹುಡುಗಿಯಾಗಿ ಅಭಿಮಾನಿಗಳ ಮನಗೆದ್ದಿರುವ ಒವಿಯಾ ತಮಿಳು, ಮಳಯಾಳಂನಲ್ಲೂ ಸಿಕ್ಕಾಪಟ್ಟೆ ಫೇಮಸ್. ಅಷ್ಟೇ ಅಲ್ಲ ಸದಾ ನೇರ ನೇರ ಮಾತಾಡಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಒವಿಯಾ ಇದೀಗ ತಮಿಳಿನ ಬಿಗ್ ಬಾಸ್ ರಿಯಾಲಿಟಿ ಶೋ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನೂ ಬಿಗ್ ಬಾಸ್ ನ ಸ್ಪರ್ಧಿ ಸಹ ಆಗಿದ್ದ ಒವಿಯಾ ಇತ್ತೀಚೆಗಷ್ಟೇ ಬಿಗ್ಬಾಸ್ ಶೋ ಬ್ಯಾನ್ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಣೆಗೆ ಇಳಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೀಗ ಸರಣಿ ಟ್ವೀಟ್ ಮೂಲಕ ಬಿಗ್ ಬಾಸ್ ವಿರುದ್ಧ ಆರೋಪಕಗಳನ್ನು ಹೊರಿಸಿದ್ದಾರೆ ಒವಿಯಾ. ಎರಡು ದಿನದ ಹಿಂದೆ ಟ್ವೀಟ್ ಮಾಡಿದ್ದ ಒವಿಯಾ, ‘ಬಿಗ್ಬಾಸ್ ಶೋ ರದ್ದಾಗಬೇಕು ಎಂಬುದಕ್ಕೆ ನಿಮ್ಮ ಸಮ್ಮತಿ ಅಥವಾ ಅಸಮ್ಮತಿ ಇದೆಯೇ? ಎಂದು ಪ್ರಶ್ನಿಸಿದ್ದರು. ಆ ಮೂಲಕ ಜನರ ಅಭಿಪ್ರಾಯ ಪಡೆಯಲು ಮುಂದಾಗಿದ್ದರು. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.ಒವಿಯಾ ಪೋಸ್ಟ್ಗೆ ಬಂದ ಕಮೆಂಟ್ಒಂದಕ್ಕೆ ಪ್ರತಿಕ್ರಿಯಿಸುತ್ತಾ, ‘ಬಿಗ್ಬಾಸ್ನವರು ತಮ್ಮ ಟಿಆರ್ಪಿಗಾಗಿ ಸ್ಪರ್ಧಾಳುಗಳಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಸಾಕು’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ಆ ಮೂಲಕ ಬಿಗ್ಬಾಸ್ ಶೋನಲ್ಲಿ ಕಿರುಕುಳ ನೀಡಲಾಗುತ್ತದೆ ಎಂಬುದರ ಸುಳಿವು ನೀಡಿದ್ದರು. ನಂತರ ಮತ್ತೊಂದು ಪೋಸ್ಟ್ನಲ್ಲಿ ನೇರವಾಗಿಯೇ ಬಿಗ್ಬಾಸ್ ವಿರುದ್ಧ ಆರೋಪಿಸಿದ ಒವಿಯಾ, ‘ಬಿಗ್ಬಾಸ್ನ ಒಪ್ಪಂದದ ಕಾಗದ, ಮಾನಸಿಕ ಕಿರುಕುಳ ನೀಡಲು, ಆತ್ಮಹತ್ಯೆಗೆ ಪ್ರೇರೇಪಿಸಲು ಸ್ಪರ್ಧಾಳುಗಳು ನೀಡುವ ಒಪ್ಪಿಗೆ ಪತ್ರವಾಗಬಾರದು. ಶೋ ಬ್ಯಾನ್ ಆಗದಿದ್ದರೂ ಪರವಾಗಿಲ್ಲ, ಸ್ಪರ್ಧಾಳುಗಳ ಮೇಲೆ ತುಸು ಕನಿಕರ ಇರಲಿ’ ಎಂದಿದ್ದಾರೆ. ಒವಿಯಾ ಅವರ ಈ ಟ್ವೀಟ್ ಸಿಕ್ಕಾಪಟ್ಟೆ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಬಿಗ್ ಬಾಸ್ ಶೋ ಬಗ್ಗೆ ಗಾಸಿಪ್ ಗಳು ಶುರುವಾಗಿವೆ.
ಟ್ರಂಪ್ ಜೊತೆ ಮಾತುಕತೆ ಇಲ್ಲ: IRGC ಕಠಿಣ ಎಚ್ಚರಿಕೆ
ಒಂದು ಕಡೆ ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕದ ಮಾಧ್ಯಮಗಳು ಶಾಂತಿ ಮಾತುಕತೆಗಳ ಬಗ್ಗೆ ಹೇಳುತ್ತಿದ್ದರೆ, ಇನ್ನೊಂದು ಕಡೆ ಇಸ್ಲಾಮಿಕ್ ರೆವ್ಯೂಲೇಷನರಿ ಗಾರ್ಡ್ ಕಾರ್ಪ್ಸ್ (IRGC) ಇದನ್ನು ಸಂಪೂರ್ಣವಾಗಿ...








