Z+ ಭದ್ರತೆ ಮನವಿ ತಿರಸ್ಕರಿಸಿದ ಓವೈಸಿ – “ನಾನು ಸ್ವತಂತ್ರ ಪಕ್ಷಿ”
z+ ಭದ್ರತೆಯನ್ನು ಸ್ವೀಕರಿಸಲು ಗೃಹ ಸಚಿವ ಅಮಿತ್ ಶಾ ಮಾಡಿದ ಮನವಿಯನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ತಿರಸ್ಕರಿಸಿದ್ದಾರೆ. ಉತ್ತರ ಪ್ರದೇಶದ ಹಾಪುರ್‌ನಲ್ಲಿ ಓವೈಸಿ ಕಾರಿನ ಮೇಲೆ ನಡೆದ ದಾಳಿ ನಡೆದಿತ್ತು.
“ಇಂದು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ನನಗೆ ಝಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸುವಂತೆ ಕೇಳಿಕೊಂಡರು. ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ 22 ಜನರಿಗಿಂತ ನನ್ನ ಜೀವದ ಮೌಲ್ಯ ಹೆಚ್ಚಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ ಎಂದು ಹೈದರಾಬಾದ್ ಸಂಸದರು ಹೇಳಿದ್ದಾರೆ.
“ನನ್ನ ಸುತ್ತಲೂ ಗನ್ ಹಿಡಿದಿರುವ ಜನರನ್ನು ನಾನು ಇಷ್ಟಪಡುವುದಿಲ್ಲ, ನಾನು ಸ್ವತಂತ್ರ ಪಕ್ಷಿ, ಮುಕ್ತವಾಗಿ ಬದುಕಲು ಬಯಸುತ್ತೇನೆ” ಎಂದು ಓವೈಸಿ ಸೇರಿಸಿದ್ದಾರೆ.
ಒವೈಸಿ ಅವರ ಬೆಂಗಾವಲು ಪಡೆ ಮೇಲಿನ ದಾಳಿಯ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದರು. ಇದಾದ ಕೆಲವೇ ಗಂಟೆಗಳ ನಂತರ ಓವೈಸಿ ಅವರು ಕೌಂಟರ್ ನೀಡಿದ್ದಾರೆ.
ಸರ್ಕಾರದ ಮೌಲ್ಯಮಾಪನದ ಪ್ರಕಾರ ಓವೈಸಿ ಇನ್ನೂ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ ಕೇಂದ್ರ ಗೃಹ ಸಚಿವರು, ಅವರಿಗೆ ಬುಲೆಟ್ ಪ್ರೂಫ್ ವಾಹನ ಮತ್ತು Z ಕೆಟಗರಿ ಭದ್ರತೆಯನ್ನು ನೀಡಲಾಗಿದೆ ಎಂದು ಹೇಳಿದರು