ADVERTISEMENT
Sunday, September 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಪಾ. ರಂಜಿತ್ ನಿರ್ದೇಶನದ ಅದ್ಧೂರಿ ಆಕ್ಷನ್ ಸಿನಿಮಾ ‘ವೆಟ್ಟುವಮ್’; ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ

admin by admin
September 20, 2026
in Cinema, Newsbeat, Uncategorized, ಮನರಂಜನೆ
pa-ranjith-vettuvam-movie-kiccha-sudeep-voice-over-kannada

pa-ranjith-vettuvam-movie-kiccha-sudeep-voice-over-kannada

Share on FacebookShare on TwitterShare on WhatsappShare on Telegram

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಪಾ. ರಂಜಿತ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಅಪೋಕ್ಯಾಲಿಪ್ಟಿಕ್ ಆಕ್ಷನ್ ಸಿನಿಮಾ ‘ವೆಟ್ಟುವಮ್’ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಪಾ. ರಂಜಿತ್ ಅವರ ‘ನೀಲಂ ಪ್ರೊಡಕ್ಷನ್ಸ್’ ಹಾಗೂ ‘ಲರ್ನ್ ಅಂಡ್ ಟೀಚ್ ಪ್ರೊಡಕ್ಷನ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದ ಕಾಲ್ಪನಿಕ ಜಗತ್ತನ್ನು ಪರಿಚಯಿಸುವ ‘ವರ್ಲ್ಡ್ ಆಫ್ ವೆಟ್ಟುವಮ್’ ವಿಡಿಯೋ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಅನಾವರಣಗೊಳ್ಳಲಿದೆ.

ಈ ‘ವರ್ಲ್ಡ್ ಆಫ್ ವೆಟ್ಟುವಮ್’ ಪರಿಚಯಾತ್ಮಕ ವಿಡಿಯೋ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡಿದ್ದು, ಬಹುಭಾಷಾ ಸೂಪರ್‌ಸ್ಟಾರ್‌ಗಳ ಧ್ವನಿಯ ಸಾಥ್ ಚಿತ್ರಕ್ಕೆ ಸಿಕ್ಕಿದೆ. ಚಿತ್ರದ ಕನ್ನಡ ಆವೃತ್ತಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಾಯ್ಸ್ ಓವರ್ ನೀಡಿರುವುದು ವಿಶೇಷ. ಉಳಿದಂತೆ ಹಿಂದಿ ಆವೃತ್ತಿಗೆ ಪ್ರತಿಭಾವಂತ ನಟ ಪಂಕಜ್ ತ್ರಿಪಾಠಿ, ತೆಲುಗಿಗೆ ರಾಣಾ ದಗ್ಗುಬಾಟಿ, ಮಲಯಾಳಂಗೆ ಸೌಬಿನ್ ಶಾಹಿರ್ ಹಾಗೂ ತಮಿಳು ಆವೃತ್ತಿಗೆ ಸ್ವತಃ ನಿರ್ದೇಶಕ ಪಾ. ರಂಜಿತ್ ಅವರೇ ಖಡಕ್ ಧ್ವನಿ ನೀಡುವ ಮೂಲಕ ಚಿತ್ರದ ಗಾಂಭೀರ್ಯವನ್ನು ಹೆಚ್ಚಿಸಿದ್ದಾರೆ.

Related posts

upendra-birthday-next-level-movie-first-look-released-tarun-shivappa

ರಿಯಲ್ ಸ್ಟಾರ್’ ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ತರುಣ್ ಶಿವಪ್ಪ ನಿರ್ಮಾಣದ ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ರಿಲೀಸ್!

September 20, 2026
natural-star-nani-the-paradise-movie-press-meet-bengaluru

“ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ‘ನ್ಯಾಚುರಲ್ ಸ್ಟಾರ್’ ನಾನಿ ಮನದಾಳದ ಮಾತು, ‘ಪ್ಯಾರಡೈಸ್’ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್!

September 20, 2026

ಅಪೋಕ್ಯಾಲಿಪ್ಟಿಕ್ ವಿಶಿಷ್ಟ ಕಲ್ಪನೆಯ ಹಿನ್ನೆಲೆಯಲ್ಲಿ ಈ ಚಿತ್ರದ ಕಥಾಹಂದರ ಸಾಗಲಿದೆ. ವಿವಿಧ ಪ್ರಬಲ ಗುಂಪುಗಳ ನಡುವಿನ ಅಧಿಕಾರದ ಸ್ಪರ್ಧೆ, ಭೀಕರ ಸಂಘರ್ಷ ಹಾಗೂ ಅನಿರೀಕ್ಷಿತ ತಿರುವುಗಳ ಸುತ್ತ ಹೆಣೆಯಲಾದ ಈ ಕಥೆಯು ಅದ್ಭುತ ದೃಶ್ಯ ವೈಭವ ಹಾಗೂ ಮೈನವಿರೇಳಿಸುವ ಹೈ-ವೋಲ್ಟೇಜ್ ಆಕ್ಷನ್ ಸನ್ನಿವೇಶಗಳನ್ನು ಒಳಗೊಂಡಿದೆ. ಭಾರತೀಯ ಸಾಂಪ್ರದಾಯಿಕ ಸಮರ ಕಲೆಗಳಾದ ‘ಅಡಿಮುರೈ’ ಮತ್ತು ‘ಮಲ್ಲಕಂಬ’ ಕೌಶಲಗಳನ್ನು ಆಧರಿಸಿ ಸಾಹಸ ದೃಶ್ಯಗಳನ್ನು ವಿನ್ಯಾಸಗೊಳಿಸಲಾಗಿದ್ದು, ಚಿತ್ರದಲ್ಲಿ ನಟಿಸಿರುವ ಪ್ರಮುಖ ಕಲಾವಿದರೆಲ್ಲರೂ ಈ ಕಲೆಗಳಲ್ಲಿ ವಿಶೇಷ ತರಬೇತಿ ಪಡೆದು ನೈಜವಾಗಿ ಆಕ್ಷನ್ ಮಾಡಿದ್ದಾರೆ.

ಚಿತ್ರದಲ್ಲಿ ಆರ್ಯ, ದಿನೇಶ್, ಶಬೀರ್, ಶೋಭಿತಾ ಧುಲಿಪಾಲ ಹಾಗೂ ಕಲೈಯರಸನ್ ಮುಂತಾದ ದಕ್ಷಿಣ ಭಾರತದ ಪ್ರತಿಭಾವಂತ ತಾರಾಗಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಎಸ್.ಎಸ್. ಮೂರ್ತಿ ಕಲಾ ನಿರ್ದೇಶನ, ರೂಪೇಶ್ ಶಾಜಿ ಛಾಯಾಗ್ರಹಣ, ಸೆಲ್ವ ಆರ್.ಕೆ. ಸಂಕಲನ, ದಿಲೀಪ್ ಸುಬ್ಬರಾಯನ್ ಸಾಹಸ ನಿರ್ದೇಶನ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ‘ವೆಟ್ಟುವಮ್’ ಚಿತ್ರದ ಫಸ್ಟ್ ಲುಕ್ ಅನಾವರಣಕ್ಕಾಗಿ ಇಡೀ ಚಿತ್ರರಂಗ ಕಾತರದಿಂದ ಕಾಯುತ್ತಿದೆ.

Tags: #Vettuvam #PaRanjith #KicchaSudeep #WorldOfVettuvam #GVPrakash #Arya #SobhitaDhulipala #NeelamProductions #KannadaCinema #SaakshaTV
ShareTweetSendShare
Join us on:

Related Posts

upendra-birthday-next-level-movie-first-look-released-tarun-shivappa

ರಿಯಲ್ ಸ್ಟಾರ್’ ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ತರುಣ್ ಶಿವಪ್ಪ ನಿರ್ಮಾಣದ ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ರಿಲೀಸ್!

by admin
September 20, 2026
0

ಬೆಂಗಳೂರು: ‘ರಿಯಲ್ ಸ್ಟಾರ್’ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬದ ಸಂಭ್ರಮ. ತಮ್ಮ ವಿಶಿಷ್ಟ ಆಲೋಚನೆ ಹಾಗೂ ಚಿತ್ರಕಥೆಗಳ ಮೂಲಕ ದಕ್ಷಿಣ ಭಾರತದಲ್ಲೇ ಹೊಸ ಅಲೆ...

natural-star-nani-the-paradise-movie-press-meet-bengaluru

“ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ‘ನ್ಯಾಚುರಲ್ ಸ್ಟಾರ್’ ನಾನಿ ಮನದಾಳದ ಮಾತು, ‘ಪ್ಯಾರಡೈಸ್’ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್!

by admin
September 20, 2026
0

​ಬೆಂಗಳೂರು: ತೆಲುಗು ಚಿತ್ರರಂಗದ ‘ನ್ಯಾಚುರಲ್ ಸ್ಟಾರ್’ ಖ್ಯಾತಿಯ ನಟ ನಾನಿ ಅಭಿನಯದ ಬಹುನಿರೀಕ್ಷಿತ ನೂತನ ಆ್ಯಕ್ಷನ್ ಡ್ರಾಮಾ The Paradise ಸಿನಿಮಾದ ಪ್ರಚಾರಾರ್ಥವಾಗಿ ಬೆಂಗಳೂರಿನಲ್ಲಿ ಅದ್ಧೂರಿ ಪತ್ರಿಕಾಗೋಷ್ಠಿ...

jio-home-offers-free-amazon-prime-lite-for-one-year-on-30mbps-and-100mbps-plans

ಜಿಯೋಹೋಮ್‌ ಬಳಕೆದಾರರಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಲೈಟ್ ಉಚಿತ

by admin
September 20, 2026
0

* 3-ಇನ್-1 (ಟಿವಿ + ಒಟಿಟಿ + ವೈ-ಫೈ) ಯೋಜನೆಯ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಪ್ರಯೋಜನವನ್ನು ಪಡೆಯುತ್ತಾರೆ * ಅಮೆಜಾನ್ ಪ್ರೈಮ್ ವಿಡಿಯೋದೊಂದಿಗೆ ಉಚಿತ ಮತ್ತು...

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

by Shwetha
September 19, 2026
0

ನಂದಿಗ್ರಾಮ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರ ನಂದಿಗ್ರಾಮದ ಉಪಚುನಾವಣೆಯಲ್ಲಿ ಈಗ ಅನಿರೀಕ್ಷಿತ ರಾಜಕೀಯ ತಿರುವು ಕಂಡುಬಂದಿದೆ. ತನ್ನ ಬಣದ ಅಭ್ಯರ್ಥಿಯೇ ಕಣದಿಂದ ಹಿಂದೆ ಸರಿದು ಆಘಾತ ನೀಡಿದ...

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

by Shwetha
September 19, 2026
0

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಬರೋಬ್ಬರಿ ₹3...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram