ಬೆಂಗಳೂರು : ಪುಂಡರ ಗಲಾಟೆ ಹಾಗೂ ತಬ್ಲಿಘಿಗಳ ನಂಟಿನಿಂದ ಹೆಚ್ಚು ಸೋಂಕಿತರನ್ನ ಹೊಂದಿರೋ ಪಾದರಾಯನಪುರ ಅಂದ್ರೆ ಇಡೀ ರಾಜ್ಯವೇ ಭಯಪಡುವಂತಾಗಿದೆ. ಇದರ ನಡುವೆ ಇಲ್ಲಿನ ಜನರ ಕುಚೇಷ್ಟೆಗಳು ಕೂಡ ಪೊಲೀಸರ ತಲೆನೋವಿಗೆ ಕಾರಣವಾಗಿದೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಆದರೂ ಇಲ್ಲಿನ ಮಹಿಳೆಯರು ಪೊಲೀಸರ ಕಣ್ತಪ್ಪಿಸಿ ಕಾಂಪೌಂಡ್ ಹಾರಿ ಹೊರ ಬರ್ತಿದ್ದಾರೆ
ಹೀಗೆ ರೈಲ್ವೆ ಹಳಿ ದಾಟಿದ್ದ ಇಬ್ಬರು ಮಹಿಳೆಯರು ಕಾಂಪೌಂಡ್ ಹಾರಿ ವಿಜಯನಗರದ ಕಡೆ ತೆರಳುತ್ತಿದ್ದರು. ಆಗ ಸ್ಥಳೀಯರು ಮತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಅವರನ್ನು ಸದ್ಯ ವಾಪಸ್ ಕಳುಹಿಸಲಾಗಿದೆ.