ಕಿತ್ತಳೆ ಮಾರಿ ಸರಕಾರಿ ಶಾಲೆಯ ಏಳಿಗೆಗಾಗಿ ಶ್ರಮಿಸಿದ ಅಕ್ಷರಸಂತ, ಈ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹರೇಕಳ ಹಾಜಬ್ಬ ಅವರನ್ನು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೌರವಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಹಾಜಬ್ಬ ಕಟ್ಟಿಸಿದ ಸರಕಾರಿ ಶಾಲೆಗೆ ಭೇಟಿ ನೀಡಿ, ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಮೂಲಕ ಹಾಜಬ್ಬರ ಕನಸನ್ನು ನನಸು ಮಾಡಬೇಕು ಎಂದರು.
ಅಕ್ಷರ ಸಂತ ಹಾಜಬ್ಬರನ್ನು ಭೇಟಿ ಮಾಡಿ ಸಂತೋಷ ವ್ಯಕ್ತಪಡಿಸಿದ ಸಚಿವರು, ಕಿತ್ತಳೆ ಮಾರಿ ಬಂದ ಆದಾಯದಲ್ಲಿ ಸರಕಾರಿ ಶಾಲೆಯ ಏಳಿಗೆಗಾಗಿ ಶ್ರಮಿಸಿರುವ ಹಾಜಬ್ಬರಂತಹ ಸಾಧಕರಿಗೆ, ಚಾ ಮಾರಿ ಜೀವನ ಸಾಗಿಸಿ ಪ್ರಧಾನಿ ಪದವಿಗೇರಿದ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಪದ್ಮಶ್ರೀ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ಸರಕಾರದ ಪರವಾಗಿ ಹಾಜಬ್ಬ ಅವರನ್ನು ಸಚಿವರು ಗೌರವಿಸಿದರೆ, ಅದಕ್ಕೆ ಪ್ರತಿಯಾಗಿ ಹಾಜಬ್ಬ ಅವರು ಸಚಿವರನ್ನು ಸನ್ಮಾನಿಸಿದರು.
ಗುತ್ತಿಗೆದಾರನ ಆತ್ಮಹತ್ಯೆಗೆ ಪ್ರಿಯಾಂಕ್ ಖರ್ಗೆ ಆಪ್ತ ಕಾರಣನಾ..? ಡೆತ್ ನೋಟ್ ನಲ್ಲಿ ಏನಿದೆ..?
2022ರಲ್ಲಿ ಕೆ.ಎಸ್. ಈಶ್ವರಪ್ಪಗೆ ರಾಜೀನಾಮೆಗೆ ಕಾರಣವಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಹೋಲುವಂತೆ ಕಲಬುರಗಿಯ 26 ವರ್ಷದ ಸಚಿನ್ ಎಂಬ ಗುತ್ತಿಗೆದಾರನ ಶವ ಕಲಬುರಗಿಯಲ್ಲಿ ರೈಲ್ವೆ...