ಪುನೀತ್ ರಾಜ್ ಕುಮಾರ್ ಗೆ ಪದ್ಮ ಶ್ರೀ ಕೊಡಬೇಕು : ಮುತಾಲಿಕ್
ಬಾಗಲಕೋಟೆ : ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮ ಶ್ರೀ ಕೊಡಬೇಕು ಎಂದು ಕೆಲದಿನಗಳಿಂದ ಸಾಕಷ್ಟು ಮಂದಿ ಆಗ್ರಹಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ಶ್ರೀರಾಮ ಸೇನೆ ಕೂಡ ಸೇರ್ಪಡೆಗೊಂಡಿದೆ.
ಅಪ್ಪುಗೆ ಪದ್ಮಶ್ರೀ ಕೊಡಬೇಕು ಎಂಬ ವಿಚಾರವಾಗಿ ಬಾಗಲಕೋಟೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡುತ್ತಾ, ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ನಟನೆ ಅತ್ಯಂತ ಅದ್ಭುತ. ರಾಜ್ ಕುಮಾರ್ ಅವರ ಮಗ, ತದ್ರೂಪಿಯಾಗಿ ಯೋಗ್ಯವಾದ ನಟನೆ. ಅವರ ಸಿನಿಮಾದಲ್ಲಿ ಒಂದು ಮೆಸೇಜ್ ಇರ್ತಿತ್ತು.
ಗಣಿ ಲೂಟಿ ಆಗುತ್ತಿರುವ ಸಮಯದಲ್ಲಿ ಅದಕ್ಕೆ ಸಂಬಂಧಿಸಿದ ಸಿನಿಮಾ ತೆಗೆದ್ರು. ಇತ್ತೀಚಿಗೆ ಯುವರತ್ನ ಮೂಲಕ ಕಾಲೇಜ್ ನಲ್ಲಿ ನಡೆಯುವ ಡ್ರಗ್ ಮಾಫಿಯಾಗೆ ಸಂಬಂಧಿಸಿದ ಸಂದೇಶ ಇತ್ತು.
ಹೀಗಾಗಿ ಅವರಿಗೆ ಪ್ರಶಸ್ತಿ ಕೊಡುವುದರಲ್ಲಿ ಏನೇನು ತಪ್ಪಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಪ್ಪು ಅಭಿಮಾನಿಗಳಿಗೆ ದೊಡ್ಮನೆ ಅನ್ನಸಂತರ್ಪಣೆ
ಇತ್ತ ಪುನೀತ್ ರಾಜಕುಮಾರ್ ಅಗಲಿ ಇಂದಿನ 12 ದಿನ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ.
ಈ ಕಾರ್ಯಕ್ರಮಕ್ಕೆ 25 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ.
ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದ ಸುತ್ತ ಮುತ್ತ 1 ಸಾವಿರ ಪೆÇಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಗೇಟ್ ನಂ.1 ಕೃಷ್ಣ ವಿಹಾರದಲ್ಲಿ ಸಾರ್ವಜನಿಕರಿಗೆ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಗೇಟ್ ನಂ.4 ಗಾಯತ್ರಿ ವಿಹಾರದಲ್ಲಿ ವಿಐಪಿ ವಾಹನಗಳ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.