ಕಣಿವೆ ನಾಡು ಜಮ್ಮು ಕಾಶ್ಮೀರದ ಶೋಫಿಯಾನ್ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಸಾವಿಗೀಡಾಗಿದ್ದಾರೆ. ಈ ವೇಳೆ ಪ್ರತ್ಯೇಕ ಘಟನೆಯೊಂದರಲ್ಲಿ ಪಾಕ್ ನ ಸೇನೆ ನಡೆಸಿದ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಪೂಂಚ್ ಬಳಿಯ ಗಡಿ ನಿಯಂತ್ರಣ ರೇಖೆ ಬಳಿ ಕದಮ ವಿರಾಮ ಉಲ್ಲಂಘಿಸಿ ಉದ್ಧಟತನ ಪ್ರದರ್ಶಿರುವ ಪಾಕ್ ಸೇನೆ ಏಕಾಎಕಿ ಗುಂಡಿನ ದಾಳಿ ನಡೆಸಿದೆ.
ಶೋಪಿಯಾನ್ ನ ಅಂಶಿಪೋರಾ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನೆಯ ಮೇಲೆ ಉಗ್ರರು ಗುಮಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರ ಮೇಲೆ ಪ್ರತಿದಾಳಿ ನಡೆಸಿರುವ ಭಾರತೀಯ ಯೋಧರು ಮೂವರು ಉಗ್ರರ ಬಲಿಪಡೆದುಕೊಂಡಿದ್ದಾರೆ. ಪೂಂಚ್ನ ಖಾರಿ ಕರ್ಮಾರಾ ಸೆಕ್ಟರ್ನಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಶೆಲ್ ದಾಳಿಗೆ ಒಂದೇ ಕುಟುಂಬದ ಮೂವರು( ತಂದೆ, ತಾಯಿ, ಮಗ) ಮೃತಪಟ್ಟಿದ್ದಾರೆ.








