ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ (Pakistan) ಬಂದು ಆಶ್ರಯ ಪಡೆಯುತ್ತಿರುವ 17 ಲಕ್ಷ ಅಫ್ಘಾನ್ ನಿರಾತ್ರಿತರಿಗೆ ಪಾಕ್ ಬಿಟ್ಟು ಹೋಗುವಂತೆ ಅಲ್ಲಿನ ಸರ್ಕಾರ ಗಡುವು ನೀಡಿದೆ.
ನವೆಂಬರ್ 1ರೊಳಗೆ ಎಲ್ಲ ಅಪ್ಘಾನ್ ರು ದೇಶ ತೊರೆಯದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ತಿಳಿಸಿದೆ. ಅನುಮತಿ ಇಲ್ಲದೆ ಪಾಕಿಸ್ತಾನಕ್ಕೆ ಬಂದಿರುವ ಅಫ್ಘಾನ್ (Afghanistan) ಪ್ರಜೆಗಳು ದೇಶದಿಂದ ಹೊರಗೆ ಹೋಗಬೇಕು. ಇಲ್ಲವಾದರೆ, ಹೊಡೆದು ಓಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಗುರುತಿನ ಚೀಟಿ ತೋರಿಸದಿದ್ದರೆ, ರಾಷ್ಟ್ರೀಯತೆ ಗುರುತಿಸಲು ಡಿಎನ್ ಎ ಟೆಸ್ಟ್ ಮಾಡಿಸುತ್ತೇವೆ. ಸೇನೆಯ ಸಹಕಾರದಿಂದ ಓಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಆಫ್ಗಾನ್ ನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಲಕ್ಷಾಂತರ ಜನರು ನೆರೆಯ ರಾಷ್ಟ್ರಗಳಿಗೆ ತೆರಳಿದ್ದರು. ಪಾಕ್ ಗೂ ಕೆಲವರು ಹೋಗಿದ್ದರು. ಹೀಗಾಗಿ ಪಾಕ್ ಈಗ ತಿರುಗಿ ಬಿದ್ದಿದೆ.