ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಹಬ್ಬಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶುಭ ಕೋರಿದ್ದಾರೆ. ಭಾರತ ದೇಶದ ಹಿಂದೂಗಳು ಮಾರ್ಚ್ ಒಂಬತ್ತು ರಂದು ಹೋಳಿ ಹಬ್ಬ ಆಚರಿಸಿದ್ದರು. ಹೋಳಿ ಹಬ್ಬ ಆಚರಣೆ ಮಾಡುವ ಸಂಪ್ರದಾಯ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ನಡೆಸಿಕೊಂಡು ಬಂದಿದ್ದಾರೆ.ಅದರ ಭಾಗವಾಗಿ ಹಿಂದೂಗಳು ಸೋಮವಾರ ಮತ್ತು ಮಂಗಳವಾರ ಪಾಕಿಸ್ತಾನದಲ್ಲಿ ಹೋಳಿ ಹಬ್ಬ ಆಚರಣೆ ಮಾಡುತ್ತಾರೆ. ಹಿಂದೂಗಳು ಆಚರಿಸುವ ಹೋಳಿ ಹಬ್ಬಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.ತಮ್ಮ ಟ್ವೀಟ್ ನಲ್ಲಿ ನಮ್ಮ ಎಲ್ಲಾ ಹಿಂದೂ ಸಮುದಾಯದವರಿಗೆ ತುಂಬಾ ಸಂತೋಷ ಮತ್ತು ಶಾಂತಿಯತ ಹೋಳಿ, ಬಣ್ಣಗಳ ಹಬ್ಬ ಎಂದು ಹೇಳಿದ್ದಾರೆ. ವಿಶೇಷ ಎಂದರೆ ಬಲೂಚಿಸ್ತಾನ್ ಪ್ರಾಂತೀಯ ಸರ್ಕಾರವು ಹೋಳಿ ಹಬ್ಬ ಆಚರಣೆಗೆಗಾಗಿ ಹಿಂದೂಗಳಿಗೆ ಎರಡು ದಿನ ರಜೆ ನೀಡಿದೆ.

https://twitter.com/ImranKhanPTI/status/1236849874638962689








