PAK vs ENG : ಕಮ್ ಬ್ಯಾಕ್ ನಿರೀಕ್ಷೆಯಲ್ಲಿ ಬಾಬರ್ ಪಡೆ
ಅತಿಥೇಯ ಪಾಕಿಸ್ತಾನ ಹಾಗೂ ಪ್ರವಾಸಿ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಇಂಗ್ಲೆಂಡ್ ಮತ್ತೊಂದು ಗೆಲುವಿನ ನಿರೀಕ್ಷೆ ಹೊಂದಿದ್ದರೆ. ತವರಿನಲ್ಲಿ ಸೋಲಿನ ಆಘಾತ ಕಂಡಿರುವ ಪಾಕಿಸ್ತಾನ ಸ್ಟ್ರಾಂಗ್ ಕಮ್‌ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದೆ.
ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಲ್ತಾನ್‌ನಲ್ಲಿ ನಡೆಯಲಿದೆ. ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ಬಲಿಷ್ಠವಾಗಿದ್ದರೂ ಕೆಲವು ಬದಲಾವಣೆಯೊಂದಿಗೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಲಿದೆ. ಮೊದಲ ಟೆಸ್ಟ್‌ನಲ್ಲಿ ಗಾಯಗೊಂಡು ಸರಣಿಯಿಂದ ಹೊರಗುಳಿದಿರುವ ಆಲ್ರೌಂಡರ್ ಲಿಯಮ್ ಲಿವಿಂಗ್‌ಸ್ಟೋನ್ ಬದಲಿದೆ ವೇಗದ ಬೌಲರ್ ಮಾರ್ಕ್ ವುಡ್ ಕಣಕ್ಕಿಳಿಯಲಿದ್ದಾರೆ.
ಲಿವಿಂಗ್‌ಸ್ಟೋನ್ ಬದಲಾಗಿ ಮಾರ್ಕ್ ವುಡ್ ತಂಡದಲ್ಲಿ ಆಡುವುದರಿಂದ ಬೌಲಿಂಗ್ ಇನ್ನಷ್ಟು ಬಲಿಷ್ಠವಾಗಲಿದೆ. ಕಳೆದ ಪಂದ್ಯದಲ್ಲಿ ಚೊಚ್ಚಲ ಪಂದ್ಯವಾಡಿದ್ದ ಆಫ್ ಸ್ಪಿನ್ನರ್ ವಿಲ್ ಜ್ಯಾಕ್, 2ನೇ ಪಂದ್ಯದಲ್ಲೂ ಸಹ ಜ್ಯಾಕ್ ಲೀಚ್ ಅವರೊಂದಿಗೆ 2ನೇ ಸ್ಪಿನರ್ ಆಗಿ ಆಡಲಿದ್ದಾರೆ ಎಂದು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ತಿಳಿಸಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದ ಬಾಬರ್ ಆಜ಼ಂ ಪಡೆ ಕಮ್‌ಬ್ಯಾಕ್ ಮಾಡುವ ತಕವದಲ್ಲಿದೆ. ಪಾಕ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದ್ದರೂ, ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನ ಕೊನೆಯಲ್ಲಿ ಮಾಡಿಕೊಂಡ ತಪ್ಪಿನಿಂದಾಗಿ ಸೋಲನುಭವಿಸಬೇಕಾಯಿತು. ಹೀಗಾಗಿ ಮೊದಲ ಟೆಸ್ಟ್ ಪಂದ್ಯದ ತಪ್ಪುಗಳಿಂದ ಎಚ್ಚೆತ್ತುಕೊಂಡು ಕಣಕ್ಕಿಳಿಯಲು ಪಾಕ್ ಸಜ್ಜಾಗಿದೆ.
ಇಂಗ್ಲೆಂಡ್ : ಝಾಕ್ ಕ್ರಾಲಿ, ಬೆನ್ ಡಾಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ವಿಲ್ ಜ್ಯಾಕ್ಸ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್, ಸೌದ್ ಶಕೀಲ್, ಮುಹಮ್ಮದ್ ರಿಜ್ವಾನ್, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನಸೀಮ್ ಶಾ, ಮೊಹಮ್ಮದ್ ವಾಸಿಂ ಜೂನಿಯರ್, ಮೊಹಮ್ಮದ್ ಅಲಿ.








