T20 World Cup – ಪಾಕಿಸ್ತಾನಕ್ಕೆ ಸೋಲು.. ಇಂಗ್ಲೆಂಡ್ ಟಿ 20 ಚಾಂಪಿಯನ್
ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡ ಟಿ 20 ಕ್ರಿಕೆಟ್ ನ ನಯಾ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಐದು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಆ ಮೂಲಕ ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ಟಿ 20 ವಿಶ್ವಕಪ್ ಎತ್ತಿ ಹಿಡಿದಿದೆ.
ಮೆಲ್ ಬಾರ್ನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಟಿ 20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವಿನ ನಗೆ ಬೀರಿ ಚುಟುಕು ಕ್ರಿಕೆಟ್ ನ ಚಾಂಪಿಯನ್ ಆಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
ಪಾಕಿಸ್ತಾನ ತಂಡದ ಪರ ನಾಯಕ ಬಾಬರ್ ಅಝಂ 32 ರನ್, ಮಸೂದ್ 38 ರನ್, ಶಾದಬ್ ಖಾನ್ 20, ರಿಜ್ವಾನ್ 15 ರನ್ ಗಳಿಸಿದ್ದು ಬಿಟ್ಟರೇ ಬೇರೆಯಾವ ಆಟಗಾರನೂ ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಪಾಕಿಸ್ತಾನ ತಂಡ ನೀಡಿದ 138 ರನ್ ಗಳ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ ತಂಡ, ನಾಯಕ ಬೆನ್ ಸ್ಟ್ರೋಕ್ಸ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 19 ನೇ ಓವರ್ ನಲ್ಲಿ ಗೆಲುವಿನ ರನ್ ಬಾರಿಸಿತು.
ಇಂಗ್ಲೆಂಡ್ ಪರ ಸ್ಟ್ರೋಕ್ಸ್ 49 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗುಳಿದರು. ಉಳಿದಂತೆ ಬಟ್ಲರ್ 26 ರನ್, ಹ್ಯಾರಿ ಬ್ರೂಕ್ಸ್ 20 ರನ್, ಮೋಯಿನ್ 19 ರನ್ ಗಳಿಸಿದರು.
ಬೆನ್ ಗೆಲುವಿನ ರನ್ ಬಾರಿಸುತ್ತಿದ್ದಂತೆ ಮೈದಾನಕ್ಕೆ ಇಂಗ್ಲೆಂಡ್ ತಂಡದ ಆಟಗಾರರು ಲಕ್ಕೆ ಇಟ್ಟರು. ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು.