ಬಾಲಕೋಟ್ ಭಯೋತ್ಪಾದಕ ತರಬೇತಿ ಕೇಂದ್ರ ಜೈಶ್-ಎ-ಮೊಹಮ್ಮದ್ ಗೆ ಹಸ್ತಾಂತರಿಸಲು ಪಾಕ್ ಏಜೆನ್ಸಿಗಳ ನಿರ್ಧಾರ Pakistan agencies Balakot terror
ಬಾಲಕೋಟ್, ನವೆಂಬರ್22: ಬಾಲಕೋಟ್ ಭಯೋತ್ಪಾದಕ ತರಬೇತಿ ಕೇಂದ್ರವನ್ನು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಹಸ್ತಾಂತರಿಸಲು ಪಾಕಿಸ್ತಾನ ಏಜೆನ್ಸಿಗಳು ನಿರ್ಧರಿಸಿದೆ. Pakistan agencies Balakot terror
ಬಾಲಕೋಟ್ ಭಯೋತ್ಪಾದಕ ತರಬೇತಿ ಕೇಂದ್ರಗಳು 2019 ರಲ್ಲಿ ಭಾರತ ದಾಳಿಯ ಸಮಯದಿಂದ ಪಾಕಿಸ್ತಾನ ಏಜೆನ್ಸಿಗಳ ನಿಯಂತ್ರಣದಲ್ಲಿದೆ. ಪುಲ್ವಾಮಾ ದಾಳಿಯ ನಂತರ, 2019 ರಲ್ಲಿ ಬಾಲಕೋಟ್ ಕೇಂದ್ರದ ಮೇಲೆ ಭಾರತೀಯ ವಾಯುಪಡೆಗಳು ದಾಳಿ ನಡೆಸಿದ್ದವು.
ಬಳಿಕ ಪಾಕಿಸ್ತಾನ ಏಜೆನ್ಸಿಗಳು ಬಾಲಕೋಟ್ ತರಬೇತಿ ಕೇಂದ್ರಗಳನ್ನು ವಶಪಡಿಸಿಕೊಂಡವು. ತರಬೇತಿ ಕೇಂದ್ರಗಳಲ್ಲಿ ಚಟುವಟಿಕೆಗಳು ಪ್ರಾರಂಭವಾಗಿದ್ದರೂ, ಅದನ್ನು ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಹಸ್ತಾಂತರಿಸುವುದರಿಂದ ಅದು ಪೂರ್ಣ ಪ್ರಮಾಣದ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ.ಭಾರತೀಯ ಭದ್ರತಾ ಸೇನೆಯು ಈ ವಾರದ ಆರಂಭದಲ್ಲಿ, ನಾಗ್ರೋಟಾ, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದೆ.
ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ಯತ್ನಿಸುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಪಾಕಿಸ್ತಾನದಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾದ ಹಿಂದೂ ದೇವಾಲಯ ಪತ್ತೆ
ಜೆಎಂನ ಕಾರ್ಯಾಚರಣಾ ಕಮಾಂಡರ್ ಮುಫ್ತಿ ರವೂಫ್ ಅಸ್ಗರ್ ನೊಂದಿಗೆ ಭಯೋತ್ಪಾದಕರು ನೇರ ಸಂಪರ್ಕದಲ್ಲಿದ್ದು, ಆತ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನ ಸಹೋದರರಾಗಿದ್ದಾನೆ. ಗುಪ್ತಚರ ಬ್ಯೂರೋ ಅಧಿಕಾರಿಗಳು ಹೇಳಿರುವ ಪ್ರಕಾರ, ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸುವುದಷ್ಟೇ ಅಲ್ಲದೇ, ಕಾಶ್ಮೀರವನ್ನು ಮತ್ತೊಮ್ಮೆ ಭಯೋತ್ಪಾದನಾ ಕೇಂದ್ರಬಿಂದುವನ್ನಾಗಿ ಮಾಡುವ ಹುನ್ನಾರವನ್ನು ಅವರು ಹೊಂದಿದ್ದಾರೆ.
370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ, ಪಾಕಿಸ್ತಾನವು ಹಲವಾರು ಸಂದರ್ಭಗಳಲ್ಲಿ ಕಾಶ್ಮೀರವನ್ನು ಗುರಿಯನ್ನಾಗಿಸಿ ದಾಳಿ ಮಾಡಲು ಪ್ರಯತ್ನಿಸಿದೆ. ಭಾರತದ ಒಳನುಸುಳಲು ಭಯೋತ್ಪಾದಕರಿಗೆ ಬೆಂಬಲ ನೀಡುವ ಪ್ರಯತ್ನದಲ್ಲಿ ಇದು ಅನೇಕ ಕದನ ವಿರಾಮ ಉಲ್ಲಂಘನೆಗಳನ್ನು ಆಶ್ರಯಿಸಿದೆ.
ಪಾಕಿಸ್ತಾನವು ಕಣಿವೆಯಲ್ಲಿ ಹಲವಾರು ಸಮಸ್ಯೆಗಳನ್ನು ಪ್ರಚಾರದ ಮೂಲಕ ಹೆಚ್ಚಿಸಲು ಪ್ರಯತ್ನಿಸಿದೆ. ಆದರೆ ಈ ಸಮಯದಲ್ಲಿ ಪ್ರತ್ಯೇಕತಾವಾದಿಗಳು ಬಯಸಿದ ಫಲಿತಾಂಶಗಳನ್ನು ನೀಡಲು ಸಾಧ್ಯವಾಗಿಲ್ಲ. ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ, ಅಜಿತ್ ದೋವಲ್ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ನಾಗ್ರೋಟಾ ದಾಳಿಯ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಭಾರತೀಯ ಭದ್ರತಾ ಸೇನೆಯು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೆಎಂಗೆ ಸೇರಿದ ನಾಲ್ಕು ಭಯೋತ್ಪಾದಕರ ಹತ್ಯೆ ಮಾಡಿ, ಅವರೊಂದಿಗೆ ದೊಡ್ಡ ಪ್ರಮಾಣದ ಸ್ಫೋಟಕಗಳ ವಶಪಡಿಸಿಕೊಂಡರು. ಈ ಮೂಲಕ ಅವರ ಪ್ರಯತ್ನಗಳನ್ನು ಮತ್ತೊಮ್ಮೆ ವಿಫಲಗೊಳಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸೋರೆಕಾಯಿ ತಿನ್ನಲು 6 ಉತ್ತಮ ಕಾರಣಗಳುhttps://t.co/76fhiw24zx
— Saaksha TV (@SaakshaTv) November 21, 2020
10 /12 ನೇ ತರಗತಿ ಪಾಸಾದವರಿಗೆ ಕರ್ನಾಟಕ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ https://t.co/70vCUmpNX0
— Saaksha TV (@SaakshaTv) November 21, 2020
10 ಮತ್ತು 12 ನೇ ತರಗತಿ ಪರೀಕ್ಷೆಗಳು ಖಂಡಿತವಾಗಿಯೂ ನಡೆಯಲಿದೆ – ಅನುರಾಗ್ ತ್ರಿಪಾಠಿhttps://t.co/S7BwXF7H7P
— Saaksha TV (@SaakshaTv) November 21, 2020