ಪಾಕಿಸ್ತಾನದ ಪ್ರದೇಶದಲ್ಲಿ ಬಿದ್ದ ಭಾರತದ ಕ್ಷೀಪಣಿ | ಪಾಕಿಸ್ತಾನ ಹೇಳಿಕೆ – Saaksha Tv
ಪಾಕಿಸ್ತಾನ: ಭಾರತದ ಕ್ಷಿಪಣಿಯೊಂದು ಪಾಕಿಸ್ತಾನಕ್ಕೆ ಸೇರಿದ ಪ್ರದೇಶವೊಂದರಲ್ಲಿ ಬಿದ್ದಿದೆ ಎಂದು ಪಾಕಿಸ್ತಾನಿ ಸಶಸ್ತ್ರ ಪಡೆಗಳು ಹೇಳಿಕೊಂಡಿವೆ.
ಹರಿಯಾಣ ರಾಜ್ಯದ ಸಿರ್ಸಾ ನಗರಕ್ಕೆ ಸಮೀಪವಿರುವ ಪ್ರದೇಶದಿಂದ ಉಡಾಯಿಸಲಾದ ಕ್ಷಿಪಣಿಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚನ್ನು ನಗರದ ಬಳಿ ಬಿದ್ದಿದೆ ಎನ್ನಲಾಗಿದೆ.
ಗುರವಾರ ಸಂಜೆ 6:43ಕ್ಕೆ ಪಾಕಿಸ್ತಾನದ ವಾಯುಪಡೆಯು ತನ್ನ ಭೂಪ್ರದೇಶದೊಳಗೆ ಬಿದ್ದಿದ್ದ ಕ್ಷಿಪಣಿಯೊಂದನ್ನು ಗುರುತಿಸಿದೆ. ಈ ಕ್ಷಿಪಣಿ ಇದ್ದಕ್ಕಿದ್ದಂತೆ ಪಾಕಿಸ್ತಾನದ ಪ್ರದೇಶದ ಕಡೆಗೆ ವೇಗವಾಗಿ ನುಗ್ಗಿದೆ ಎಂದು ಪಾಕಿಸ್ತಾನಿ ಸಶಸ್ತ್ರ ಪಡೆಗಳ ವಕ್ತಾರರನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಣಿಯಿಂದಾಗಿ ಸ್ವಲ್ಪ ಮಟ್ಟದ ಹಾನಿಯಾಗಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ಪಾಕಿಸ್ತಾನ ಮಿಲಿಟರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ಕುರಿತು ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.








