ಭಾರತದ 30 ಮೀನುಗಾರರನ್ನು ಅಪಹರಿಸಿದ ಪಾಕಿಸ್ತಾನ Saaksha Tv
ಪೋರಬಂದರ್ : ಭಾರತದ ಜಲಗಡಿಯಲ್ಲಿದ್ದ ಸುಮಾರು 30 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಅಪಹರಿಸಿದೆ.
ಪಾಕಿಸ್ತಾನದ ಕಡಲ ಭದ್ರತಾ ಪಡೆ 5 ದೋಣಿಗಳು ಸೇರಿದಂತೆ 30 ಮೀನುಗಾರರನ್ನು ಶನಿವಾರ ಅಪಹರಿಸಿದೆ ಎಂದು ಮೂಲಗಳು ತಿಳಿಸಿವೆ. ಪೋರಬಂದರ್, ವನಕ್ಬರಾ, ಓಖಾ ಮೂಲದ ತಲಾ ಒಂದು ಬೋಟ್ ಮತ್ತು ಗಿರ್ ಸೋಮನಾಥ್ಗೆ ಸೇರಿದ 2 ಬೋಟ್‌ಗಳನ್ನು ಅಪಹರಿಸಲಾಗಿದ್ದು, ಈ ಮೀನುಗಾರರನ್ನು ಬಿಡುಗಡೆ ಮಾಡಲು ನ್ಯಾಷನಲ್ ಫೀ ಫೋರಂ ಒತ್ತಾಯಿಸಿದೆ.
ಕಳೆದ 25 ದಿನಗಳಲ್ಲಿ ಒಟ್ಟು 120 ಭಾರತೀಯ ಮೀನುಗಾರರಿದ್ದ 20 ಬೋಟ್‌ಗಳನ್ನು ಪಾಕಿಸ್ತಾನ ಮೆರೈನ್ ಫೋರ್ಸ್ ಅಪಹರಿಸಿದ್ದರೂ, ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿರುವ ಬಗ್ಗೆ ಮೀನುಗಾರರಲ್ಲಿ ಅಸಮಾಧಾನವಿದೆ ಎನ್ನಲಾಗಿದೆ. ಪ್ರಸ್ತುತ ಸಾಕಷ್ಟು ಮಂದಿಯನ್ನು ಪಾಕಿಸ್ತಾನದ ಜೈಲುಗಳಲ್ಲಿ ಇರಿಸಲಾಗಿದೆ.








