Pakistan : ಪಾಪಿ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ಕೊಟ್ಟ ಭಾರತ
ಕೇಂದ್ರ ಸರ್ಕಾರವು ಐಟಿ ನಿಯಮಗಳು 2021 ರ ಅಡಿಯಲ್ಲಿ, ಪಾಕಿಸ್ತಾನ ಮೂಲದ ಒಟಿಟಿ ಪ್ಲಾಟ್ಫಾರ್ಮ್ ವಿಡ್ಲಿ ಟಿವಿಯ ಸ್ಮಾರ್ಟ್ ಟಿವಿ ಅಪ್ಲಿಕೇಶನ್, ವೆಬ್ಸೈಟ್, ಎರಡು ಮೊಬೈಲ್ ಅಪ್ಲಿಕೇಶನ್ ಗಳು ಮತ್ತು ನಾಲ್ಕು ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಕ್ಷಣವೇ ನಿರ್ಬಂಧಿಸಲು ಆದೇಶ ಹೊರಡಿಸಿದೆ.
ಒಟಿಟಿ ಪ್ಲಾಟ್ಫಾರ್ಮ್ ಇತ್ತೀಚೆಗೆ “ಸೇವಕ್: ದಿ ಕನ್ಫೆಷನ್ಸ್” ಎಂಬ ವೆಬ್ ಸರಣಿಯನ್ನ ಬಿಡುಗಡೆ ಮಾಡಿತ್ತು. ಇದು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಷ್ಟ್ರೀಯ ಭದ್ರತೆ, ವಿದೇಶಿ ರಾಜ್ಯಗಳೊಂದಿಗಿನ ಭಾರತದ ಸ್ನೇಹಪರ ಸಂಬಂಧ ಮತ್ತು ದೇಶದಲ್ಲಿನ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕ ಎಂದು ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ನೀಡಿದೆ.
ಈ ವೆಬ್ ಸರಣಿಯ ಮೂರು ಕಂತುಗಳನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದ್ದು, 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ದಿನವಾದ ನವೆಂಬರ್ 26ರಂದು ಸರಣಿಯ ಮೊದಲ ಸಂಚಿಕೆ ಬಿಡುಗಡೆಯಾಗಿದೆ.
‘ಸೇವಕ್: ದಿ ಕನ್ಫೆಷನ್ಸ್’ ವೆಬ್ ಸರಣಿಯು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ, ಗ್ರಹಾಂ ಸ್ಟೇನ್ಸ್ ಎಂಬ ಕ್ರಿಶ್ಚಿಯನ್ ಮಿಷನರಿಯ ಹತ್ಯೆ, ಮಾಲೆಗಾಂವ್ ಸ್ಫೋಟಗಳು, ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ, ಅಂತಾರಾಜ್ಯ ನದಿ ನೀರಿನ ವಿವಾದ ಇತ್ಯಾದಿ ಸೂಕ್ಷ್ಮ ಐತಿಹಾಸಿಕ ಘಟನೆಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಭಾರತ ವಿರೋಧಿ ಕಥನವನ್ನ ಚಿತ್ರಿಸಿದೆ.
Pakistan: India gave another shock to the sinful Pakistan








