ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರ, ಜಗತ್ತಿಗೆ ಅವರ ಪಾಠಗಳ ಅಗತ್ಯವಿಲ್ಲ : ವಿಶ್ವ ಸಂಸ್ಥೆಯಲ್ಲಿ ಭಾರತ
ಜಿನೀವಾ, ಸೆಪ್ಟೆಂಬರ್27: ಜಿನೀವಾದಲ್ಲಿ ಶುಕ್ರವಾರ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 45 ನೇ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರಿಗೆ ಸುರಕ್ಷತೆಯನ್ನು ಒದಗಿಸುವಲ್ಲಿ ಪಾಕಿಸ್ತಾನ ದಾಖಲೆ ಕಳಪೆಯಾಗಿದೆ ಎಂದು ಭಾರತ ಟೀಕಿಸಿದೆ. ವಿಶ್ವಸಂಸ್ಥೆಯಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ 45 ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಭಾರತದ ಖಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ ಸೆಂಥಿಲ್ ಕುಮಾರ್, ಭಯೋತ್ಪಾದನೆಯ ಕೇಂದ್ರಬಿಂದು ಎಂದು ಕರೆಯಲ್ಪಡುವ ದೇಶದಿಂದ ಮಾನವ ಹಕ್ಕುಗಳ ಬಗ್ಗೆ ಜಗತ್ತಿಗೆ ಪಾಠಗಳ ಅಗತ್ಯವಿಲ್ಲ. ಇತರರಿಗೆ ಉಪದೇಶಿಸುವ ಮೊದಲು ಭಯೋತ್ಪಾದನೆ, ಮಾನವ ಹಕ್ಕುಗಳ ದುರುಪಯೋಗ ಮತ್ತು ಅಮಾನವೀಯತೆಯು ಅಪರಾಧ ಎಂದು ಪಾಕಿಸ್ತಾನ ನೆನಪಿಡಬೇಕು. ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ದೇಶದಿಂದ ಮಾನವ ಹಕ್ಕುಗಳ ಬಗ್ಗೆ ಪಾಠಗಳು ಜಗತ್ತಿಗೆ ಅಗತ್ಯವಿಲ್ಲ ಎಂದು ಹೇಳಿದರು.
ಕಡಿಮೆ ದರದಲ್ಲಿ “ಮೇಡ್ ಇನ್ ಇಂಡಿಯಾ” ಕೊರೊನಾ ಕಿಟ್ ಲಭ್ಯ..!
ಪಾಕಿಸ್ತಾನದಲ್ಲಿ ಬಲೂಚ್‌ಗಳು ಅನುಭವಿಸುತ್ತಿರುವ ದೌರ್ಜನ್ಯವನ್ನೂ ಕುಮಾರ್ ಎತ್ತಿ ತೋರಿಸಿದ ಕುಮಾರ್, ಬಲವಂತದ ಕಣ್ಮರೆಗಳು, ಹಿಂಸಾಚಾರ, ಬಲವಂತದ ಸಾಮೂಹಿಕ ಸ್ಥಳಾಂತರಗಳು, ಕಿರುಕುಳ, ಕಾನೂನು ಬಾಹಿರ ಹತ್ಯೆಗಳು, ಸೇನಾ ಕಾರ್ಯಾಚರಣೆಗಳು, ಚಿತ್ರಹಿಂಸೆ, ಕೊಲೆ, ಚಿತ್ರಹಿಂಸೆ ಶಿಬಿರಗಳು, ಬಂಧನ ಕೇಂದ್ರಗಳು, ಮಿಲಿಟರಿ ಶಿಬಿರಗಳು ಬಲೂಚಿಸ್ತಾನದಲ್ಲಿ ನಿಯಮಿತ ಲಕ್ಷಣಗಳಾಗಿವೆ ಎಂದು ಹೇಳಿದರು.
ಇಲ್ಲಿಯವರೆಗೆ 47,000 ಬಲೂಚ್ ಮತ್ತು 35,000 ಪಶ್ತೂನ್ ಗಳು ಕಾಣೆಯಾಗಿದ್ದು, ಅವರು ಎಲ್ಲಿದ್ದಾರೆಂದು ಯಾರಿಗೂ ತಿಳಿದಿಲ್ಲ. ಬಲೂಚಿಸ್ತಾನದೊಳಗೆ ಬಲೂಚ್ ಎಂದಿಗೂ ಸುರಕ್ಷಿತ ಭಾವನೆ ಹೊಂದಿಲ್ಲ ಮತ್ತು ಈಗ ಅವರು ಪಾಕಿಸ್ತಾನದ ಹೊರಗೆ ಸಹ ಸುರಕ್ಷಿತ ಭಾವನೆ ಹೊಂದಿಲ್ಲ. 2018 ರ ಡಿಸೆಂಬರ್‌ನಲ್ಲಿ ರಶೀದ್ ಹುಸೇನ್ ನಾಪತ್ತೆಯಾದ ಪ್ರಕರಣ ಮತ್ತು ಪತ್ರಕರ್ತ ಸಾಜಿದ್ ಹುಸೇನ್ ಬಲೂಚ್ ಮಾರ್ಚ್ 2020 ರಲ್ಲಿ ನಾಪತ್ತೆಯಾದ ನಂತರ ಅವರನ್ನು ಹತ್ಯೆಗೈಯಲಾಯಿತು. ಈ ಪ್ರಕರಣವು ಬಲೂಚ್ ಮಾನವ ಹಕ್ಕುಗಳ ರಕ್ಷಕರನ್ನು ಪಾಕಿಸ್ತಾನವನ್ನು ತೊರೆದ ನಂತರವೂ ಗುರಿಯಾಗಿಸಿ ನಿರ್ಮೂಲನೆ ಮಾಡಲಾಗುತ್ತಿದೆ ಎಂಬುದನ್ನು ನಿರೂಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಫೈನಾನ್ಶಿಯರ್ ಕಿಡ್ನಾಪ್ ಪ್ರಕರಣದಲ್ಲಿ ಸುನಾಮಿ ಕಿಟ್ಟಿ..!
1947 ರಲ್ಲಿ 23% ರಷ್ಟಿದ್ದ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯೆಯು ಅತ್ಯಲ್ಪ ಸಂಖ್ಯೆಗೆ ಇಳಿದಿರುವುದು ಬಹಳ ಕಳವಳಕಾರಿ ವಿಷಯವಾಗಿದೆ ಎಂದು ಪ್ರಥಮ ಕಾರ್ಯದರ್ಶಿ ವಿಶ್ವ ಸಂಸ್ಥೆಯ ಗಮನಸೆಳೆದರು.
ಕಾರಣಗಳನ್ನು ಕಂಡುಹಿಡಿಯುವುದು ಕಷ್ಟವೇನಲ್ಲ. ಕೊಲೆಗಳು, ಹಿಂಸಾಚಾರ, ಬಲವಂತದ ಮತಾಂತರಗಳು, ಬಲವಂತದ ಸ್ಥಳಾಂತರದ ಮೂಲಕ ವ್ಯವಸ್ಥಿತ ತಾರತಮ್ಯ ಮತ್ತು ಕಿರುಕುಳವು ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಬಹುತೇಕ ನಾಶಪಡಿಸಿದೆ ಎಂದು ಅವರು ಹೇಳಿದರು.








