ಕೊಹ್ಲಿ ಸೆಂಚೂರಿಗಾಗಿ ಪಾಕ್ ಆಟಗಾರರಿಂದ ಪ್ರಾರ್ಥನೆ
ಟೀಂ ಇಂಡಿಯಾ ಮೆಷಿನ್ ಗನ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸುಮಾರು ಮೂರು ವರ್ಷಗಳಾಗುತ್ತಿದೆ. pakistan-players-praying-kohli-71st-century saaksha tv
ವಿರಾಟ್ ಕೊಹ್ಲಿ ಸೆಂಚೂರಿ ಸಿಡಿಸದೇ ಈ ರೀತಿ ವರ್ಷಗಳನ್ನು ಕಳೆಯುತ್ತಿರುವುದು ಇದೇ ಮೊದಲು.
ವಿರಾಟ್ ಯಾವಾಗ ಶತಕ ಬಾರಿಸುತ್ತಾರೆ ಎಂದು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಆದರೆ ಇತ್ತೀಚೆಗೆ ಒಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಪಾಕಿಸ್ತಾನ ಕ್ರಿಕೆಟಿಗರು ಸೇರಿದಂತೆ ಆ ದೇಶದ ಕ್ರಿಕೆಟ್ ಅಭಿಮಾನಿಗಳು ಕೂಡ ಕೊಹ್ಲಿಯ ಶತಕಕ್ಕೆ ಪ್ರಾರ್ಥನೆ ನಡೆಸುತ್ತಿದ್ದಾರಂತೆ.
ಪಿಎಸ್ಎಲ್ (ಪಾಕಿಸ್ತಾನ ಪ್ರೀಮಿಯರ್ ಲೀಗ್) ನಲ್ಲಿ ಭಾಗವಹಿಸುತ್ತಿರುವ ಇಸ್ಲಾಮಾಬಾದ್ ಯುನೈಟೆಡ್ ಸ್ಟ್ರಾಟೆಜಿ ಮ್ಯಾನೇಜರ್ ಹಸನ್ ಚೀಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಪಿಎಸ್ಎಲ್ ಬಗ್ಗೆ ಹೆಚ್ಚು ಟ್ವೀಟ್ ಮಾಡಬಾರದು ಎಂದು ಯೋಚಿಸಿದೆ. ಆದರೆ ಒಂದು ವಿಷಯ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಪಿಎಸ್‌ಎಲ್‌ನಲ್ಲಿ ಆಡುವ ಪಾಕಿಸ್ತಾನಿ ಆಟಗಾರರಿಂದ ಹಿಡಿದು ಅಭಿಮಾನಿಗಳವರೆಗೆ ಒಂದು ವಿಷಯವನ್ನು ಬಲವಾಗಿ ಬಯಸುತ್ತಾರೆ.
ಅದೇನೆಂದರೆ.. ಕೊಹ್ಲಿ 71ನೇ ಶತಕ ಸಿಡಿಸಬೇಕೆಂದು. ಇದಕ್ಕೆ ಪಾಕ್ ಆಟಗಾರರು ಸೇರಿದಂತೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇದು ನನಗೆ ಆಶ್ಚರ್ಯ ಉಂಟು ಮಾಡಿಲ್ಲ. ಹೆಸರಿಗೆ ಪ್ರತಿಸ್ಪರ್ಧಿಯಾಗಿದ್ದರೂ ಕ್ರಿಕೆಟ್‌ನಲ್ಲಿ ಮಿಂಚುವ ಆಟಗಾರನಿಗೆ ಯಾವುದೇ ದೇಶದಲ್ಲಾದ್ರೂ ಅಭಿಮಾನಿಗಳಿರುತ್ತಾರೆ ಅನ್ನೋದಕ್ಕೆ ವಿರಾಟ್ ಕೊಹ್ಲಿ ಉದಾಹರಣೆ. ಕೊಹ್ಲಿ ಖಂಡಿತವಾಗಿಯೂ 71ನೇ ಶತಕ ಸಿಡಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.









