ವಿಶ್ವದಾದ್ಯಂತ ಕೊರೊನಾ ತನ್ನ ಕದಂಬ ಬಾಹುಗಳನ್ನು ಚಾಚುತ್ತಿದೆ. ಕೊರೊನಾ ಮಾರಿಯಿಂದ ವಿಶ್ವದ ಜನರೇ ನಲುಗುತ್ತಿದ್ದಾರೆ. ಅದಕ್ಕಾಗಿ ಎಲ್ಲಾ ದೇಶಗಳು ಪರಿಹಾರಕ್ಕೆ ಎದುರು ನೋಡುತ್ತಿವೆ. ಪಾಕಿಸ್ತಾನ ಮಾತ್ರ ಪದೆ ಪದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಮ್ಮು-ಕಾಶ್ಮೀರ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೊರೊನಾ ಸೋಂಕು ನಿಗ್ರಹಕ್ಕಾಗಿ ಆಯೋಜಿತವಾಗಿದ್ದ ಸಾರ್ಕ್ ರಾಷ್ಟ್ರಗಳ ವಿಡಿಯೋ ಕಾನ್ಫರೆನ್ಸ್ನಲಲ್ಲಿ ಪಾಕಿಸ್ತಾನ ಈ ವಿಷಯವನ್ನು ಪ್ರಸ್ತಾಪಿಸಿ ಮುಖಭಂಗ ಅನುಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಾರ್ಕ್ ದೇಶಗಳ ನಡುವಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಪಾಕಿಸ್ತಾನದ ಆರೋಗ್ಯ ಸಚಿವ ಜಾಫರ್ ಮಿಜರ್ ಭಾಗವಹಿಸಿದ್ದರು. ಈ ವೇಳೆ ಅವರು ಭಾರತ ಆಕ್ರಮಿತ ಜಮ್ಮು -ಕಾಶ್ಮೀರದಲ್ಲಿ ನಾವು ಕೊರೊನಾ ವೈರಸ್ ಸಂಬಂಧ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ನಿರ್ಬಂಧವನ್ನು ತೆಗೆದರೆ ಸಹಾಯವಾಗುತ್ತದೆ ಎಂದು ಮೋದಿ ಅವರನ್ನು ಕೆದಕಿದ್ದರು. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಮೌನವಾಗಿಯೇ ತಿರುಗೇಟು ನೀಡಿದ್ದಾರೆ. ಇದರಿಂದ ಪಾಕ್ ಸಚಿವ ಮುಖಭಂಗ ಅನುಭವಿಸಿದ್ದರು. ಕೊರೊನಾ ವಿರುದ್ಧ ತುರ್ತು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ವಿಡಿಯೋ ಕಾನ್ಫರೆನ್ಸ್ ಹಮ್ಮಿಕೊಳ್ಳಲಾಗಿತ್ತು. ಸಾರ್ಕ್ ರಾಷ್ಟ್ರಗಳಾದ ಆಫ್ಘಾನಿಸ್ತಾನದಿಂದ ಅಧ್ಯಕ್ಷ ಅಶ್ರಫ್ ಗನಿ, ಮಾಲ್ಡೀ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ, ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ, ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್, ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಮತ್ತು ಪಾಕಿಸ್ತಾನದಿಂದ ಆರೋಗ್ಯ ಸಚಿವ ಜಾಫರ್ ಮಿಜರ್ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದರು. ಕೋವಿಡ್-೧೯ ವಿರುದ್ಧ ಹೋರಾಟಕ್ಕೆ ಏಷ್ಯಾ ರಾಷ್ಟ್ರಗಳ ಜಂಟಿ ಹೋರಾಟಕ್ಕೆ ಮೋದಿ ಕೈಗೊಂಡಿರುವ ಉಪಕ್ರಮವು ಪ್ರಶಂಸೆಗೆ ಪಾತ್ರವಾಗಿದೆ.
ಬಿಜೆಪಿಯಲ್ಲಿ ಬಿರುಕು: ಅತೃಪ್ತ ನಾಯಕರ ‘ಬಣ’ ಕದನ
ಕರ್ನಾಟಕದ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ. ಪಕ್ಷದೊಳಗಿನ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದು, ಈ ಸಭೆ ಹಲವು...