ಇಂಗ್ಲೆಂಡ್ ವಿರುದ್ಧದ ಟೆಸ್ಟ್ – ಟಿ-ಟ್ವೆಂಟಿ ಸರಣಿಗೆ ಪಾಕ್ ತಂಡ ಪ್ರಕಟ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಟಿ-ಟ್ವೆಂಟಿ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್‍ನಲ್ಲಿ ಮೂರು ಟೆಸ್ಟ್ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳಿಗೆ ಒಟ್ಟು 29 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲ ಟೂರ್ನಿ ನಡೆಯಲಿದೆ.
ಪಾಕ್ ತಂಡಕ್ಕೆ ವೇಗಿ ಸೊಹೈಲ್ ಖಾನ್ ಅವರು ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಹಾಗೇ ಹೈದರ್ ಆಲಿ ಅವರು ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಇಂಗ್ಲೆಂಡ್ ಸರಣಿ ಪಾಕ್‍ಗೆ ಸವಾಲಾಗಿ ಪರಿಣಮಿಸಲಿದೆ. ಕಳೆದ ಮಾರ್ಚ್‍ನಿಂದ
ಯಾವುದೇ ಪಂದ್ಯಗಳನ್ನು ಆಡಿಲ್ಲ. ಇಂಗ್ಲೆಂಡ್ ತಂಡ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ ಎಂದು ಪಾಕ್ ಕ್ರಿಕೆಟ್‍ನ ಮುಖ್ಯ ತರಬೇತುದಾರ ಮತ್ತು ಮುಖ್ಯ ತರಬೇತುದಾರ ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.
36ರ ಹರೆಯದ ಸೊಹೈಲ್ ಖಾನ್ ಅವರು 2016ರ ನಂತರ ಪಾಕ್ ತಂಡದಿಂದ ದೂರವೇ ಉಳಿದಿದ್ದರು. ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಸರಣಿಯ ನಂತರ ಸೊಹೈಲ್ ಖಾನ್ ಇದೇ ಮೊದಲ ಬಾರಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಸೊಹೈಲ್ ಖಾನ್ ಅವರು ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ತಂಡಕ್ಕೆ ಮತ್ತೆ ಸೇರಿಸಿಕೊಳ್ಳಲಾಗಿದೆ. ಸೊಹೈಲ್ ಖಾನ್ ತಂಡಕ್ಕೆ ಸೇರ್ಪಡೆಗೊಂಡಿರುವುದರಿಂದ ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.
ಹೈದರ್ ಆಲಿ ಕೂಡ ದೇಶಿ ಟೂರ್ನಿಗಳಲ್ಲಿ ಶ್ರೇಷ್ಠ ನಿರ್ವಹಣೆ ಮಾಡಿದ್ದಾರೆ. 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲೂ ಆಡಿದ್ದಾರೆ. ಇದೀಗ ಟೆಸ್ಟ್ ಕ್ರಿಕೆಟ್‍ಗೆ ಎಂಟ್ರಿಯಾಗಲು ಪಾಕ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಟೆಸ್ಟ್ ತಂಡವನ್ನು ಅಝರ್ ಆಲಿ ಅವರು ಮುನ್ನಡೆಸಿದ್ರೆ, ಟಿ-ಟ್ವೆಂಟಿ ತಂಡವನ್ನು ಬಾಬರ್ ಆಝಾಮ್ ಅವರು ಸಾರಥ್ಯ ವಹಿಸಿದ್ದಾರೆ.
ಪಾಕಿಸ್ತಾನ ತಂಡ – ಅಬಿದ್ ಆಲಿ, ಫಖಾರ್ ಝಾಮಾನ್, ಇಮಾಮ್ ಉಲ್ ಹಕ್, ಶಾನ್ ಮಸೂದ್, ಅಝರ್ ಆಲಿ (ಟೆಸ್ಟ್ ತಂಡದ ನಾಯಕ), ಬಾಬರ್ ಆಝಾಮ್ (ಟಿ-ಟ್ವೆಂಟಿ ತಂಡದ ನಾಯಕ), ಆಸಾದ್ ಶಫಿಕ್, ಫಾವದ್ ಆಲಾಮ್, ಹೈದರ್ ಆಲಿ, ಇಫ್ತಿಕಾರ್ ಅಹಮ್ಮದ್, ಖುಶ್ದಿಲ್ ಶಾಹ, ಮಹಮ್ಮದ್ ಹಫೀಜ್, ಶೋಯಿಬ್ ಮಲ್ಲಿಕ್, ಮಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಫ್ರಾಝ್ ಅಹಮ್ಮದ್ (ವಿಕೆಟ್ ಕೀಪರ್), ಫಾಹಿಮ್ ಆಶ್ರಫ್, ಹ್ಯಾರಿಸ್ ರಾಫ್, ಇಮ್ರಾನ್ ಖಾನ್, ಮಹಮ್ಮದ್ ಅಬ್ಬಾಸ್, ಮಹಮ್ಮದ್ ಹಸ್ನೇನ್, ನಾಸೀಮ್ ಶಾಹ, ಸಹೇನ್ ಆಫ್ರಿದಿ, ಸೊಹೈಲ್ ಖಾನ್, ಉಸ್ಮಾನ್ ಶಿನ್‍ವಾರಿ, ವಾಹಬ್ ರಿಯಾಝ್, ಇಮಾದ್ ವಸೀಮ್, ಕಾಸೀಫ್ ಭಟ್ಟಿ, ಶಾದಬ್ ಖಾನ್, ಯಾಸೀರ್ ಶಾಹ.








