ಕಲಬುರಗಿ : ದೇಶ ಸೇರಿದಂತೆ ರಾಜ್ಯದಲ್ಲೂ ಪಾಕ್ ಪರ ಘೋಷಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಲಬುರಗಿ ನಗರದ ಮನೆ ಒಂದರ ಗೋಡೆ ಮೇಲೆ ಕಿಡಿಗೇಡಿಗಳು ಪಾಕಿಸ್ತಾನ್ ಜಿಂದಾಬಾದ್ ಎಂದು ಬರೆಯಲಾಗಿದೆ. ನಗರದ ಸಾತ್ ಗುಂಬಜ್ ನಗರದ ಕಿಶನ್ ರಾವ್ ಹಾಗರಗುಂಡಗಿ ಎಂಬುವರ ಮನೆಯ ಗೋಡೆಯ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಬರೆದು, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಾಚ್ಯಶಬ್ದಗಳ ಬಳಕೆ ಮಾಡಲಾಗಿದೆ. ಇದಲ್ಲದೆ ಮನೆಯ ಪಕ್ಕದಲ್ಲೇ ನಿಂತಿದ್ದ ಅಬ್ದುಲ್ ಎಂಬುವರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಲು ಯತ್ನಿಸಿದ್ದಾರೆ.








