ದುಬೈ : ದುಬೈನಲ್ಲಿ ಭಾರತೀಯ ಮೂಲದ ದಂಪತಿಯನ್ನು ಪಾಕಿಸ್ತಾನಿ ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆಗೈದಿದ್ದಾನೆ. ದುಬೈನ ಅರೇಬಿಯನ್ ರಾಂಚಸ್ ನಲ್ಲಿ ಈ ಘಟನೆ ನಡೆದಿದೆ. ಹಿರೇನ್ ಆಧಿಯ ಮತ್ತು ವಿಧಿ ಆಧಿಯ ಕೊಲೆಯಾದ ದಂಪತಿ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇವರು ಬಚಾವ್ ಆಗಿದ್ದಾರೆ.
ಹಿರೇನ್ ಆಧಿ ವಾಸವಾಗಿದ್ದ ವಿಲ್ಲಾಕ್ಕೆ ನುಗ್ಗಿ ದರೋಡೆ ಕೃತ್ಯ ನಡೆಸಿದ ವೇಳೆ ಭಾರತೀಯ ಮೂಲದ ದಂಪತಿಯನ್ನು ಹತ್ಯೆಗೈದಿರುವುದಾಗಿ ವರದಿ ವಿವರಿಸಿದೆ. ಹತ್ಯೆ ಪ್ರಕರಣದ ಬಗ್ಗೆ ದಂಪತಿಯ ಪುತ್ರಿ ದುಬೈ ಪೊಲೀಸ್ ಕಮಾಂಡ್ ರೂಂಗೆ ಮಾಹಿತಿ ನೀಡಿರುವುದಾಗಿ ದುಬೈ ಕ್ರಿಮಿನಲ್ ಇನ್ವೆಸ್ಟಿಗೇಶನ್ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಜಮಾಲ್ ಅಲ್ ಜಲ್ಲಾಫ್ ತಿಳಿಸಿದ್ದಾರೆ.
ಘಟನೆ ನಡೆದ 24 ಗಂಟೆಯೊಳಗೆ ದುಬೈ ಪೊಲೀಸರು ಹಂತಕ ಪಾಕ್ ವ್ಯಕ್ತಿಯನ್ನು ಬಂಧಿಸಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.