ಅಳಿಯನಿಗೆ ವರದಕ್ಷಿಣೆಯಾಗಿ ಎಕೆ47 ಕೊಟ್ಟು ಚುಂಬಿಸಿದ ಅತ್ತೆ
ಇಸ್ಲಾಮಾಬಾದ್ : ಸಾಮಾನ್ಯವಾಗಿ ವರನಿಗೆ ವರದಕ್ಷಿಣೆಯಾಗಿ ಕಾರು, ಬಂಗಲೆ, ಹಣ, ಬೈಕ್ ಕೊಡೋದನ್ನ ನಾವು ನೋಡಿದ್ದೇವೆ.
ಆದ್ರೆ ಮಹಿಳೆಯೊಬ್ಬಳು ತನ್ನ ಅಳಿಯನಿಗೆ ವರದಕ್ಷಿಣೆಯಾಗಿ ಎಕೆ 47 ರೈಫಲ್ ಕೊಟ್ಟು ಸುದ್ದಿಯಾಗಿದ್ದಾಳೆ.
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Kalashnikov rifle as a wedding present pic.twitter.com/BTTYng5cQL
— Adeel Ahsan (@syedadeelahsan) November 25, 2020
ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ವಧು-ವರರಿಗೆ ಶುಭಕೋರಲು ವೇದಿಕೆ ಮೇಲೆ ಬಂದ ವಧುವಿನ ತಾಯಿ ವರನಿಗೆ ಎಕೆ47 ರೈಫಲ್ ಕೊಟ್ಟು ಚುಂಬಿಸಿದ್ದಾಳೆ.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನಿಯರು ಇದು ಕಾಮನ್ ಎಂದು ಶೇರ್ ಮಾಡಿದ್ದಾರೆ.
ಆದ್ರೆ ಇಂತಹ ಅನಿಷ್ಟ ಪದ್ಧತಿಗಳಿಂದಲೇ ಪಾಕಿಸ್ತಾನ ಭಯೋತ್ಪಾದಕರ ನಾಡಗಿದೆ ಎಂದು ವಿರೋಧಿಸಿ ಕೆಲವರು ಟೀಕೆ ಮಾಡಿದ್ದಾರೆ. ಅಲ್ಲದೆ ನೆಟ್ಟಿಗರು ಕೂಡ ನಾನಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.