ಪಾಕಿಸ್ತಾನ ಅಲ್ಲ ಪಾಪಿಗಳ ಸ್ಥಾನ : ಈ ನೆಲದಲ್ಲಿ ಹಿಂದೂ ಯುವತಿಯರಿಗಿಲ್ಲ ರಕ್ಷಣೆ..!
ಪಾಕಿಸ್ತಾನ: ಪಾಪಿಗಳ ಸ್ಥಾನ ಪಾಕಿಸ್ತಾನದಲ್ಲಿ ಹಿಂದೂಗಲಿಗೆ ಉಳಿಗಾಲವಿಲ್ಲ. ಅಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ , ಶೋಷಣೆ, ಅದ್ರಲ್ಲೂ ಹಿಂದೂ ಮಹಿಳೆಯರ ಮೇಲೆ ಮೃಗೀಯ ವರ್ತನೆಗಳಿಗೆ ಕೊನೆಯೇ ಇಲ್ಲವೆಂಬಂತಾಗಿದೆ. ಇಮ್ರಾನ್ ಖಾನ್ ಸರ್ಕಾರ ಹಿಂದೂ ಮಹಿಳೆಯರ ರಕ್ಷಣೆಗಾಗಿ ಯಾವುದೇ ಕ್ರಮಗಳನ್ನ ತೆಗೆದುಕೊಳ್ತಿಲ್ಲ ಎಂಬುದು ಜಗತ್ತಿನ ಎದುರಿರುವ ತೆರೆದ ಸತ್ಯ. ಹಿಂದೂ ಯುವತಿಯರನ್ನ ಬಲವಂತವಾಗಿ ಮತಾಂತರ ಮಾಡಲಾಗ್ತಿದೆ.
ಮೂಲಗಳ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿ ವರ್ಷ ಸಾವಿರಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿ ಮುಸ್ಲಿಂ ಯುವಕರು ವಿವಾಹವಾಗುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಹೊಸ ವರ್ಷಕ್ಕೆ ಜಿಯೋ ಬಳಕೆದಾರರಿಗೆ ಭರ್ಜರಿ ಗಿಫ್ಟ್
ಹೌದು ಪಾಕಿಸ್ಥಾನದ ಕರ್ಮಕಾಂಡದ ಬಗ್ಗೆ ಯುವತಿಯೊಬ್ಬಳು ಮಾತನಾಡಿದ್ದಾಳೆ. ಇನ್ನೂ ಈಕೆಯ ಹೆಸರು ನೇಹಾ. ಈಕೆಗೆ 14 ವರ್ಷವಿರುವಾಗಲೇ 45 ವರ್ಷದವನ ಜೊತೆ ಬಲವಂತವಾಗಿ ಮತಾಂತರ ಮಾಡಿ ಮದುವೆಮಾಡಲಾಗಿತ್ತು.
ಈಗ ಈ ಯುವತಿಗೆ ಇಬ್ಬರು ಮಕ್ಕಳಿದ್ದಾರೆ. ಅಪ್ರಾಪ್ತೆಯನ್ನು ವಿವಾಹವಾದ ಆರೋಪದ ಮೇಲೆ ಆಕೆಯ ಪತಿಯನ್ನು ಇಷ್ಟು ವರ್ಷಗಳ ಬಳಿಕ ಈಗ ಬಂಧಿಸಲಾಗಿದೆ.
ಇನ್ನೂ ಪತಿಯ ಬಂಧನಕ್ಕೂ ಮುನ್ನ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ನೇಹಾ. ಆಗ ಆಕೆಯನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ನೋವಿನ ಕಥೆಯನ್ನ ಹೇಳಿಕೊಂಡಿದ್ದಾಳೆ. ಅಲ್ಲದೇ ಇದೇ ರೀತಿ ಪ್ರತಿ ವರ್ಷವೂ ಸಾವಿರಾರು ಯುವತಿಯರನ್ನ ಬಲವಂತವಾಗಿ ಮತಾಂತರ ಮಾಡಿ ಹಿಂಸೆ ನೀಡಲಾಗುತ್ತೆ ಎಂಬ ಕಹಿ ಸತ್ಯ ಬಿಚ್ಚಿಟ್ಟಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








