‘ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ತಮ್ಮ ಅಧಿಕಾರಾವಧಿ ಪೂರೈಸಿದರೆ ದೇಶ ದಿವಾಳಿಯಾಗುತ್ತದೆ’…!
ಪಾಕಿಸ್ತಾನ : ಪಾಕಿಸ್ತಾನದ ಆರ್ಥಿಕತೆಯು ತೀರ ಕುಸಿದಿದ್ದು, ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದು ಇಡೀ ಜಗತ್ತಿದೆ ತಿಳಿದಿದೆ. ಇದೀಗ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಾವಧಿಯನ್ನು ಪೂರೈಸಿದರೆ ದೇಶ ದಿವಾಳಿಯಾಗಲಿದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲವಾಲ್ ಭುಟ್ಟೊ ಹೇಳಿದ್ದಾರೆ.
ಹೌದು ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರದ ಕಾರ್ಯವೈಖರಿ , ವಿಫಲತೆಗಳ ಕಿಡಿಕಾರಿದ ಭುಟ್ಟೊ ಈ ಸರ್ಕಾರ ಯುವಕರ ಭರವಸೆಗೆ ಆದ್ಯತೆ ನೀಡದೆ ಅವರನ್ನ ಕಡೆಗಣಿಸುತ್ತಿದೆ.. ಅವರ ಭವಿಷ್ಯದ ಜೊತೆ ಆಟವಾಡ್ತಿದೆ. ಇದು ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಮಾಡಿದ ದೊಡ್ಡ ಅಪರಾಧ ಎಂದು ಕಿಡಿಕಾರಿದ್ದಾರೆ.
ಸದ್ಯ ಪಾಕಿಸ್ತಾನದ ಅರ್ಥಿಕತೆಯು ಗಂಭೀರ ಸ್ಥಿತಿಯಲ್ಲಿದ್ದು, ಕೋವಿಡ್ ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ದೊಡ್ಡ ಪೆಟ್ಟು ನೀಡಿದೆ ಎಂದಿದ್ದಾರೆ. ಕೊರೊನಾ ಸೋಂಕಿಗೂ ಮೊದಲೇ ದೇಶದ ಆರ್ಥಿಕತೆಯನ್ನು ಇಮ್ರಾನ್ ಖಾನ್ ಹಾಳು ಮಾಡಿದ್ದಾರೆ, ಈಗಿರುವ ಆಡಳಿತದಿಂದಾಗಿ ಉಂದಿನ ಸಾರ್ಕಾರಗಳು ದಶಕಗಳವರೆಗೆ ತೊಂದರೆ ಅನುಭವಿಸಬೇಕಾಗುತ್ತದೆ.ದತ್ತಿ ಸಂಸ್ಥೆಯ ಮಾದರಿಯಲ್ಲಿ ದೇಶವನ್ನಾಳುವ ಇಮ್ರಾನ್ ಖಾನ್ ಯೋಜನೆ ವಿಫಲವಾಗಿದೆ ಎಂದು ಬುಟ್ಟೊ ಆಕ್ರೋಶ ಹೊರಹಾಕಿದ್ದಾರೆ .
ಇದೇ ವೇಳೆ ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದಲ್ಲಿ ಎಲ್ಲಾ ಪ್ರಧಾನಿಗಳು ಸೇರಿ ಕೂಡಿಸಿದ್ದಕ್ಕಿಂತ ಹೆಚ್ಚು ಹಾನಿಯನ್ನು ಇಮ್ರಾನ್ ಖಾನ್ ಒಬ್ಬರೇ ಮಾಡಿದ್ದಾರೆಇಮ್ರಾನ್ ಖಾನ್ ಮತ್ತು ಅವರ ಬೆಂಬಲಿಗರು ದೇಶದ ಹಣ ಲೂಟಿ ಮಾಡಿದ್ದಾರೆ. ಬಳಿಕ ಪರ್ವೇಜ್ ಮುಷರಫ್ ಅವರಂತೆಯೇ ಲಂಡನ್ ಗೆ ಪಲಾಯನ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








