ಲೈವ್ ನಲ್ಲೇ ಪಾಕ್ ಸಂಸದನಿಗೆ ಕಪಾಳ ಮೋಕ್ಷ ಮಾಡಿದ ಮಹಿಳೆ… ನಗೆಪಾಟಲಿಗೀಡಾದ ಡಿಬೇಟ್..! – VIDEO
ಪಾಕಿಸ್ತಾನ : ಪಾಕಿಸ್ತಾನದಲ್ಲಿ ಅಲ್ಲಿನ ಸಂಸದರು , ಅದ್ರಲ್ಲೂ ಮಾಧ್ಯಮದವರು ಅವಾಂತರಗಳು ಸಹಜವಾಗಿ ಆಗಾಗ ನೆಟ್ಟಿಗರನ್ನ ನಗಿಸುವ ಎಂಟರ್ ಟೈನ್ ವಿಚಾರವಾಗಿ ಪರಿವರ್ತನೆ ಆಗುತ್ತಿರುತ್ತೆ.. ಅಲ್ಲಿನ ಮಾಧ್ಯಮದ ಅದ್ರಲ್ಲೂ ನಿರೂಕರ ಹೇಳಿಕೆಗಳು ತೀರಾ ಟ್ರೋಲ್ ಗಳಾಗುವುದು ಹಾಗೂ ನಗೆಪಾಲಿಗೀಡಾಗೋದು ಇದೆಲ್ಲಾ ತುಂಬಾನೆ ಕಾಮನ್..
ಇದೀಗ ಲೈವ್ ಡಿಬೇಟ್ ನಲ್ಲಿ ಮಹಿಲೆಯೊಬ್ಬರು ತಮ್ಮ ತಾಳ್ಮೆ ಕಲೆದುಕೊಂಡು ಪಾಕ್ ಸಂಸದನ ಕಪಾಳಕ್ಕೆ ಬಾರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ತುಣುಕು ಭಾರೀ ವೈರಲ್ ಆಗ್ತಿದೆ.. ಈ ವಿಡಿಯೋ ನೊಡಿದ ನೆಟ್ಟಿಗರು ಬಿದ್ದು ಬಿದ್ದು ನಗ್ತಿದ್ಧಾರೆ.
ಪಾಕಿಸ್ತಾನದ ಎಕ್ಸ್ಪ್ರೆಸ್ ವಾಹಿನಿಯಲ್ಲಿ ಪ್ಯಾನಲ್ ಡಿಬೇಟ್ ವೇಲೆ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಪರವಾಗಿ ಪಕ್ಷದ ನಾಯಕಿ ಡಾ.ಫಿರ್ದೌಸ್ ಆಶಿಕ್ ಭಾಗವಹಿಸಿದ್ದರು. ಅವರ ಜತೆ ಪ್ರತಿಪಕ್ಷದ ಖಾದಿರ್ ಖಾನ್ ಮಂಡೋಖೈಲ್ ಕೂಡ ಇದ್ದರು. ಯಾವುದೋ ವಿಚಾರದಲ್ಲಿ ಇಬ್ಬರ ನಡುವಿನ ವಾದ ವಿವಾದ ತಾರಕಕ್ಕೇರಿದೆ. ಸಿಟ್ಟು ಹೆಚ್ಚಾದ ನಂತರ ತಾಳ್ಮೆ ಕಳೆದುಕೊಂಡ ಫಿರ್ದೌಸ್, ಸಂಸದನ ಕೆನ್ನೆಗೆ ಬಾರಿಸಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
https://twitter.com/i/status/1402789334709903364








