‘ಅತ್ಯಾಚಾರಕ್ಕೆ ಕಾರಣ ಮಹಿಳೆಯರು ಉಡುಪು’ – ಇಮ್ರಾನ್ ಗೆ ಪಾಕ್ ನ ಮಹಿಳಾ ಪತ್ರಕರ್ತೆಯರಿಂದಲೇ ಮುಖಭಂಗ..!
ಪಾಕಿಸ್ತಾನ : ಇತ್ತೀಚೆಗೆ ಪಾಕಿಸ್ತಾನದಲ್ಲಿ ಹೆಚ್ಚಾಗ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರು ಒಂದು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಇದು ಪಾಕ್ ಅಷ್ಟೇ ಅಲ್ಲ ಇಡೀ ವಿಶ್ವಾದ್ಯಂತದ ಮಹಿಳೆಯರನ್ನ ಕೆರಳಿಸಿದೆ.
ಹೌದು… ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಮಹಿಳೆಯರು ಧರಿಸುವ ಉಡುಪೇ ಕಾರಣ ಎಂದು ಇಮ್ರಾನ್ ಕಾನ್ ತುಚ್ಛವಾದ ಹೇಳಿಕೆ ನೀಡಿ ಬಾರೀ ಮುಖಭಂಗಕ್ಕೆ ಒಳಗಾಗಿದ್ದಾರೆ. ಇದೀಗ ಪಾಕಿಸ್ತಾನದಾದ್ಯಂತ ಮಹಿಲಾ ಪತ್ರಕರ್ತರು ಇಮ್ರಾನ್ ಖಾನ್ ವಿರುದ್ಧ ಸಿಡಿದೆದ್ದಿದ್ದಾರೆ. ಇಮ್ರಾಣ್ ಹೇಳಿಕೆಯನ್ನ ತೀವ್ರವಾಗಿ ಖಂಡಿಸುತ್ತಿದ್ದಾರೆ.
ಮಹಿಳಾ ಪತ್ರಕರ್ತರು ಪಾಕ್ ಪ್ರದಾನಿ ಇಮ್ರಾನ್ ಖಾನ್ ವಿರುದ್ಧ ತಿರುಗಿಬಿದ್ದಿದ್ದು, ಅತ್ಯಾಚಾರಕ್ಕೆ ಮುಖ್ಯ ಕಾರಣ ಮಹಿಳೆಯರ ಬಟ್ಟೆ ಎನ್ನುವ ಮೂಲಕ ಸಂತ್ರಸ್ತೆಯರೇ ಆರೋಪಿಗಳು ಎಂದಿದ್ದಾರೆ ಇಮ್ರಾನ್ ಖಾನ್.. ಆರೋಪಿಯ ವಿರುದ್ಧ ಮಾತನಾಡುವುದನ್ನ ಬಿಟ್ಟು ಮಹಿಳೆಯರು ಅವರ ಉಡುಪಿನ ಬಗ್ಗೆ ಮಾತನಾಡಿ ಲೈಂಗಿಕ ದೌರ್ಜನ್ಯವೆಸಗಗುವ ಕಾಮುಕರಿಗೆ ಮತ್ತಷ್ಟು ಪ್ರೇರಪಣೆ ನೀಡುವಂತಹ ಹೇಳಿಕೆ ನೀಡಿದ್ದಾರೆ ಎಂದು ಹಿರಿಯ ಪತ್ರಕರ್ತೆ ನಾಸಿಮ್ ಝೆಹರಾ ಕಿಡಿಕಾರಿದ್ದಾರೆ.
ಅತ್ಯಾಚಾರ ಅನ್ನೋದು ಮಹಿಳೆಯರ ಬಟ್ಟೆ ಮೇಲೆ ನಿರ್ಭರವಾಗಿರುವುದಿಲ್ಲ. ಕೆಲ ಕಾಮಾಂಧ ಪುರುಷರ ನಡವಳಿಕೆ, ಅವರ ವ್ಯಕ್ತಿತ್ವದಿಂದ, ಅವರ ಮನಸ್ಥಿತಿಯಿಂದ ಇಂತಹ ಅಪರಾಧಗಳು ನಡೆಯುತ್ತವೆ. ಮೊದಲಿಗೆ ಇಂತಹ ಮನಸ್ಥಿತಿ ಬದಲಾಗಬೇಕಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಟ್ನಲ್ಲಿ ಅತ್ಯಾಚಾರದಂತಹ ಪ್ರಕರಣಗಳನ್ನ ತಡೆಯುವ ಬಗ್ಗೆ, ಆ ನಿಟ್ಟಿನಲ್ಲಿ ಕಠಿಣ ಕಾನೂನು ತರುವ ಬದಲಾಗಿ ದೇಶದ ಪ್ರಧಾನಿ ಇಮ್ರಾನ್ ಖಾನ್ ಅವರು ಮಹಿಳೆಯರ ಬಟ್ಟೆಯ ಬಗ್ಗೆಯೇ ದೋಷಾರೋಪ ಮಾಡಿ ಈಗ ಮುಖಭಂಗಕ್ಕೀಡಾಗಿದ್ದಂತೂ ಸುಳ್ಳಲ್ಲ..
ಅಪ್ರಾಪ್ತೆ ಮೇಲೆ ಅತ್ಯಾಚಾರ – ಕಾಮುಕನಿಗೆ 20 ವರ್ಷ ಜೈಲು ಶಿಕ್ಷೆ..!
ಅಪ್ರಾಪ್ತೆಯ ಮೇಲೆ ಅತ್ಯಾಚಾರ – 19 ವರ್ಷದ ಯುವಕ ಅರೆಸ್ಟ್