ಸಕ್ಕರೆ, ಹತ್ತಿ ಕೊಡಿ ಪ್ಲೀಸ್..! ಭಾರತಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಮನವಿ..!
ನವದೆಹಲಿ: ಸದಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಾ ದುರಹಂಕಾರದಲ್ಲಿ ಮೆರೆಯೋ ಪಾಕಿಸ್ತಾನ ಇದೀಗ ಭಾರತದ ಮುಂದೆ ಮಂಡಿಯೂರಿದೆ. ಹೌದು ಪಾಕಿಸ್ತಾನದಲ್ಲಿ ಸಕ್ಕರೆ ಮತ್ತು ಹತ್ತಿಗೆ ತೀವ್ರ ಕೊರತೆಯಿದ್ದು, ಬೇರೆ ದೇಶಗಳಿಂದ ಆಮದಿಗೆ ದುಬಾರಿಯಾಗ್ತಿದೆ. ಈ ಹಿನ್ನೆಲೆ ಹತ್ತಿ ಹಾಗೂ ಸಕ್ಕರೆ ಪೂರೈಕೆಗೆ ಭಾರತದ ಮುಂದೆ ಪಾಕಿಸ್ತಾನ ಮನವಿ ಮಾಡಿಕೊಂಡಿದೆ.
ಇಮ್ರಾನ್ ಖಾನ್ ಸರ್ಕಾರ ಭಾರತದ ಜೊತೆ ವ್ಯಾಪಾರಕ್ಕೆ ಮುಂದಾಗಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
2021 ಜೂನ್ ವರೆಗೆ ಭಾರತದ ಹತ್ತಿ ಆಮದು ಮಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಶೀಘ್ರದಲ್ಲಿಯೇ ಸಕ್ಕರೆ ಆಮದು ಮಾಡಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.
2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದುಗೊಳಿಸಲಾಗಿತ್ತು. ಆದ್ರೆ ಪಾಕಿಸ್ತಾನ ಈ ವಿಷಯದಲ್ಲಿ ಮೂಗಿ ತೂರಿಸಿ ವಿಶ್ವದಲ್ಲಿ ನಗೆಪಾಟಲಾಗಿತ್ತು. ಆರ್ಟಿಕಲ್ 370 ರದ್ದುಗೊಳಿಸಿದ್ದ ದಿನದಿಂದ ಪಾಕಿಸ್ತಾನ ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನ ಆಮದು ಮಾಡಿಕೊಳ್ಳೋದನ್ನ ನಿಲ್ಲಿಸಿತ್ತು. ಇದೀಗ ಆರ್ಥಿಕ ತಜ್ಞರ ಸಲಹೆ ಮೇರೆಗೆ ಭಾರತದಿಂದ ಸಕ್ಕರೆ ಹತ್ತಿ ರಫ್ತು ಮಾಡುವಂತೆ ಪಾಕ್ ಮನವಿ ಮಾಡಿಕೊಂಡಿದೆ.
ನೂತನ ಆರ್ಥಿಕ ವರ್ಷದಲ್ಲೇ 400 ಅಂಕ ಜಿಗಿದ ಸೆನ್ಸೆಕ್ಸ್..!
ಇಂದು ದೇಶದಲ್ಲಿ ಕೊರೊನಾ ಮಹಾಸ್ಫೋಟ – ಒಂದೇ ದಿನ 72 ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆ..!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮತಗಟ್ಟೆಯಲ್ಲಿ CRPF ಯೋಧನ ಶವ ಪತ್ತೆ..!








