ಪಾಕ್ ನಲ್ಲಿ ಕತ್ತೆಗಳ ಸಂಖ್ಯೆ ಹೆಚ್ಚಳ : ಮುಜುಗರಕ್ಕೆ ಒಳಗಾದ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನ : ಪಾಕಿಸ್ತಾನದಲ್ಲಿ ಏಕಾಏಕಿ ಕತ್ತೆಗಳ ಸಂಖ್ಯೆ ಹೆಚ್ಚಾಗಿದೆ.. ಚೀನಾಗೆ ರಫ್ತು ಮಾಡಲು ಕತ್ತೆ ಸಾಕಾಣಿಕೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗ್ತಿದೆ ಎಂದು ವರದಿಯಾಗಿದೆ.. ಅಲ್ಲದೇ ಕಳೆದ ವರ್ಷಕ್ಕಿಂತ ಈ ಬಾರಿ ಇವುಗಳ ಸಂಖ್ಯೆ 1 ಲಕ್ಷ ಹೆಚ್ಚಳವಾಗಿದ್ದು, ಸದ್ಯ 56 ಲಕ್ಷ ಕತ್ತೆಗಳಿವೆ.
ಇತ್ತ ಕತ್ತೆಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ ಪಾಕಿಸ್ತಾನದ ಪ್ರತಿಪಕ್ಷಗಳು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಟೀಕಾಪ್ರಹಾರಗಳನ್ನ ನಡೆಸುತ್ತಿದ್ದು, ಪ್ರದಾನಿ ಇಮ್ರಾನ್ ಕಾನ್ ಅವರು ಮುಜುಗರಕ್ಕೆ ಒಳಗಾಗಿದ್ದಾರೆ. ಪಾಕಿಸ್ತಾನದ ವಿತ್ತ ಸಚಿವ ಶೌಕತ್ ತಾರಿನ್ 2020-21ರ ಆರ್ಥಿಕ ಸಮೀಕ್ಷೆ ಅಂಕಿ ಅಂಶಗಳನ್ನು ಪ್ರಕಟಿಸುತ್ತಿರುವ ಸಂದರ್ಭದಲ್ಲಿ ಕತ್ತೆಗಳ ವಿಷಯವನ್ನು ಪ್ರಸ್ತಾಪಿಸಿದರು.
ಕೂಡಲೇ ಪ್ರತಿಪಕ್ಷಗಳು, ನಮಗೆ ಕತ್ತೆಯ ಸರ್ಕಾರ ಬೇಡ…. ‘ಡಾಂಕಿ ರಾಜಾ ಕಿ ಸರ್ಕಾರ ನಹೀ ಚಲೇಗಿ ನಹೀ ಚಲೇಗಿ’ ಎಂದು ಘೋಷಣೆ ಕೂಗಲು ಶುರು ಮಾಡಿದ್ದು, ಇದೇ ಘೋಷಣೆಯೊಂದಿಗೆ ಬೀದಿಗೂ ಇಳಿಯಲಾಗಿದೆ.
ಪ್ರತಿವರ್ಷವೂ ಪಾಕಿಸ್ತಾನವು ಕತ್ತೆಗಳನ್ನು ಚೀನಾಕ್ಕೆ ರಫ್ತು ಮಾಡುತ್ತವೆ. ಚೀನಾದಲ್ಲಿ ಕತ್ತೆಗಳ ಮಾಂಸ ಸೇರಿದಂತೆ ಇನ್ನಿತರ ಭಾಗಗಳಿಂದ ಔಷಧಿಗಳನ್ನು ತಯಾರಿಸುತ್ತವೆ. ಇವುಗಳ ಚರ್ಮದಿಂದ ಸಿದ್ಧವಾಗುವ ಔಷಧಿ ಇಮ್ಯೂನಿಟಿ ಸಿಸ್ಟಂನ್ನು ಸ್ಟ್ರಾಂಗ್ ಮಾಡುವಲ್ಲಿ ಕೆಲಸ ಮಾಡುತ್ತದೆ. ರಕ್ತ ಪ್ರಕ್ರಿಯೆಯನ್ನು ಬಲಪಡಿಸುತ್ತದೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಪಾಕಿಸ್ತಾನ ಹೆಚ್ಚು ಹೆಚ್ಚು ಕತ್ತೆಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಈ ಬಾರಿ ಲಾಕ್‌ಡೌನ್‌ನಲ್ಲಿ ಇನ್ನಷ್ಟು ಹೆಚ್ಚು ಕತ್ತೆಗಳ ಜನನಕ್ಕೆ ಕಾರಣವಾಗಿದ್ದು, ಆದಾಯ ಹೆಚ್ಚಿಸಿಕೊಂಡಿದೆ. ಸದ್ಯ ಪಾಕಿಸ್ತಾನ ಕತ್ತೆಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನದಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತಿರುವ ಚೀನಾ ಮೊದಲ ಸ್ಥಾನದಲ್ಲಿದೆ.
https://twitter.com/BirPra_Singh/status/1403602482740154370








