ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ: ಪಾಕ್ ಗೆ ದ.ಏಷ್ಯಾ ಮಾನವ ಹಕ್ಕುಗಳ ಸಂಸ್ಥೆ ವಾರ್ನಿಂಗ್..!
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೇ ಇದ್ದರೂ ಪಾಕಿಸ್ತಾನ ಸರ್ಕಾರ ಮಾತ್ರ ಯಾವುದೇ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ. ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ ಪಾಕ್.
ಹೊಸ ವರ್ಷದಿಂದ ಪಿಯು ಕಾಲೇಜ್ ರೀಪನ್ ಪಕ್ಕಾ: ಎಸ್‍ಒಪಿ ಬಿಡುಗಡೆ ಮಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ
ಇನ್ನೂ ಕಳೆದ ವರ್ಷ ಥಾರ್ ಪಾರ್ಕರ್ ನಲ್ಲಿ 17 ವರ್ಷದ ಹಿಂದೂ ಬಾಲಕಿ ಮೇಲೆ ಅತ್ಯಚಾರ ಎಸಗಿ ನಂತರ ಆಕೆ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣ ಇದಕ್ಕೆ ಉದಾಹರಣೆಯಾಗಿದೆ. ಈ ಪ್ರಕರಣದಿಂದಾಗಿ ಪಾಕಿಸ್ತಾನಕ್ಕೆ ಇಡೀ ವಿಶ್ವ ಛೀಮಾರಿ ಹಾಕಿತ್ತು. ಇದೀಗ ಪಾಕ್ ವಿರುದ್ಧ ದಕ್ಷಿಣ ಏಷ್ಯಾದ ಮಾನವ ಹಕ್ಕುಗಳ ತಂಡ ತೀವ್ರ ಆಕ್ರೋಶ ಹೊರ ಹಾಕಿದೆ. ಪಾಕ್ನಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಿರುವುದರ ಬಗ್ಗೆ ಗುಂಪು ಇಸ್ಲಾಮಾಬಾದ್ ವಿರುದ್ಧ ವಾಗ್ದಾಳಿ ನಡೆಸಿದೆ.
ಅಲ್ಲದೇ ಹಿಂದೂ ಹೆಣ್ಣುಮಕ್ಕಳ ಬಲವಂತದ ಮತಾಂತರ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಬ್ರೇಕ್ ಹಾಕುವಂತೆ ಪಾಕಿಸ್ತಾನಕ್ಕೆ ಮಾನವ ಹಕ್ಕುಗಳ ಗುಂಪು ತಾಕೀತು ಮಾಡಿದೆ.
ಮಗಳ ಅಪಹರಣಕ್ಕೆ ತಾಯಿಯದ್ದೇ ಮಾಸ್ಟರ್ ಪ್ಲಾನ್ : ಕಾರಣ ಏನು..!
ಇದೇ ವೇಳೆ ನಾಗರಿಕರ ಸ್ವಾತಂತ್ರ್ಯ ನಿರ್ಬಂಧಿಸುವ ಕಾನೂನುಗಳ ಮೂಲಕ ಸಾರ್ವಜನಿಕರ ಜೀವನದ ಮೇಲೆ ಆಕ್ರಮಣಕಾರಿ ದಾಳಿ ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದೆ. ಇನ್ನೂ ಪಾಕಿಸ್ತಾನದಲ್ಲಿ ಬಲವಂತವಾಗಿ ಹಿಂದೂ ಮಹಿಳೆಯರನ್ನು ಕೊಲೆ ಮಾಡುವುದು ಬಂಧಿಸುವುದು, ಮಹಿಳೆಯರು ತಮ್ಮ ಕುಟುಂಬಸ್ಥರ ಜೊತೆ ಸಂಪರ್ಕ ಕಳೆದುಕೊಳ್ಳುವಂತೆ ಹಿಂಸೆ ನೀಡುವುದು, ಇಂತಹ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








