ಕಾಶ್ಮೀರ ವಿವಾದ – ಮುಸ್ಲಿಂ ದೇಶಗಳ ಬೆಂಬಲ ಕೋರಲು ಮುಂದಾದ ಪಾಕಿಸ್ತಾನ
ಪಾಕಿಸ್ತಾನ : ಪಾಕಿಸ್ತಾನಕ್ಕೆ ಸದಾ ಭಾರತದ ಜೊತೆಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬಾರದೇ ಹೋದ್ರೆ ತಿಂದ ಅನ್ನ ಜೀರಣ ಆಗಲ್ಲ ಅನ್ಸುತ್ತೆ.. ನಮ್ಮ ಆಂತರಿಕ ವಿಚಾರವಾದ ಕಾಶ್ಮೀರದ ಬಗ್ಗೆ ಮೂಗು ತೂರಿಸದೇ ಹೋದ್ರೆ ಸಮಾಧಾನ ಇಲ್ಲ ಅನ್ಸುತ್ತೆ. ಪದೇ ಪದೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರದ ಸುದ್ದಿ ಎತ್ತುತ್ತಲೇ ವಿಶ್ವದ ಎದುರು ಮುಖಭಂಗ ಅನುಭವಿಸುತ್ತಲೇ ಇದ್ರು ಬುದ್ದಿ ಬಂದಿಲ್ಲ.
ಇದೀಗ ವಿವಾದವನ್ನು ಎತ್ತಿ ಹಿಡಿಯಲು ಮತ್ತು ಬೆಂಬಲ ಪಡೆಯುವ ಸಲುವಾಗಿ ಮುಂದಿನ ವರ್ಷ ಇಸ್ಲಾಮಾಬಾದ್ನಲ್ಲಿ ಮುಸ್ಲಿಂ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಕರೆಯುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿಕೆ ನೀಡಿದ್ದಾರೆ.
ಹೌದು ದೇವರು ನನಗೆ ಸಮಯವನ್ನು ನೀಡಿದರೆ 2022 ಮಾರ್ಚ್ನಲ್ಲಿ ನಾನು ಇಸ್ಲಾಮಿಕ್ ಜಗತ್ತಿನ ವಿದೇಶಾಂಗ ಸಚಿವರುಗಳನ್ನು ಇಸ್ಲಾಮಾಬಾದ್ಗೆ ಆಹ್ವಾನಿಸಲಿದ್ದೇನೆ. ಕಾಶ್ಮೀರ ವಿವಾದದಲ್ಲಿ ಅವರನ್ನು ಒಗ್ಗೂಡಿಸಲು ಪ್ರಯತ್ನಿಸಲಿದ್ದೇನೆ ಎಂದಿದ್ದಾರೆ. ಇದೇ ವೇಳೆ ಪಾಕಿಸ್ತಾನದ ವಿರುದ್ಧ ಅವಮಾನಕರ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದ್ದಲ್ಲಿ ಮಾತುಕತೆಯನ್ನು ನಿಲ್ಲಿಸಲಿದ್ದೇವೆ ಎಂದು ಅಫ್ಗಾನಿಸ್ತಾನ ನಾಯಕರಿಗೂ ಖುರೇಷಿ ಎಚ್ಚರಿಸಿದ್ದಾರೆ.








