PAN-Aadhaar : ಪ್ಯಾನ್ – ಆಧಾರ್ ಜೋಡಣೆ ದಿನಾಂಕ ಜೂನ್ 30ರ ವರೆಗೆ ವಿಸ್ತರಣೆ…..
ತೆರಿಗೆದಾರರಿಗೆ ಕಾಲಾವಕಾಶ ಕೊಡುವ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಜೋಡಣೆ ಮಾಡುವ ದಿನಾಂಕವನ್ನು ಜೂನ್ 30, 2023 ಕ್ಕೆ ವಿಸ್ತರಿಸಿ ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಮಾರ್ಚ್ 31 ಕ್ಕೆ ಕೊನೆಯ ದಿನಾಂಕವನ್ನ ನಿಗಧಿಪಡಿಸಲಾಗಿತ್ತು.
ಇದೀಗ ಆದಾಯ ತೆರಿಗೆ ಕಾಯಿದೆ, 1961 (‘ಆಕ್ಟ್’) ನಿಬಂಧನೆಗಳ ಅಡಿಯಲ್ಲಿ, ಜೂನ್ 30 ರ ಒಳಗಾಗಿ ನಿಗದಿತ ಶುಲ್ಕವನ್ನ ಪಾವತಿಸಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ ಮಾಡಬಹುದಾಗಿದೆ.
ಜುಲೈ 1, 2023 ರಿಂದ ಆಧಾರ್ ಲಿಂಕ್ ಮಾಡಲು ವಿಫಲವಾದರೇ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. PAN ನಿಷ್ಕ್ರಿಯವಾಗಿರುವ ಅವಧಿಗೆ ಅಂತಹ ಮರು ಪಾವತಿಗೆ ಬಡ್ಡಿಯನ್ನ ಪಾವತಿಸಲಾಗುವುದಿಲ್ಲ ಮತ್ತು ಕಾಯಿದೆಯಲ್ಲಿ ಒದಗಿಸಿದಂತೆ TDS ಮತ್ತು TCS ಅನ್ನ ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ.
ನಿರ್ಧಿಷ್ಟ ರಾಜ್ಯಗಳಲ್ಲಿ ವಾಸಿಸುವವರು. ಭಾರತದ ಪ್ರಜೆಯಲ್ಲದ ವ್ಯಕ್ತಿ ಹಾಗೂ ಎಂಬತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳು ಈ ಮೇಲಿನ ಯಾವುದೇ ಪರಿಣಾಮಗಳಿಗೆ ಜವಬ್ದಾರರಾಗಿರುವುದಿಲ್ಲ. ಇವರಿಗೆ ವಿನಾಯಿತಿ ನೀಡಲಾಗಿದೆ.
ಇಲ್ಲಿಯವರೆಗೆ 51 ಕೋಟಿಗೂ ಹೆಚ್ಚು ಪ್ಯಾನ್ಗಳನ್ನು ಈಗಾಗಲೇ ಆಧಾರ್ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ಹೇಳಲಾಗಿದೆ. ಕೆಳಗಿನ ಲಿಂಕ್ ಮೂಲಕ https://eportal.incometax.gov.in/iec/foservices/#/pre-login/bl-link-aadhaar ಮೂಲಕ ಪ್ಯಾನ್ ಅನ್ನ ಆಧಾರ್ನೊಂದಿಗೆ ಲಿಂಕ್ ಮಾಡಬಹುದು.
PAN-Aadhaar: PAN-Aadhaar linking date extended till June 30….