ವಿಜಯಪುರ: ದೇಶಾದ್ಯಂತ ಒಬ್ಬರಿಗೆ ಒಂದೇ ಪ್ಯಾನಕಾರ್ಡ್ (ಪರ್ಮನೆಂಟ್ ಅಕೌಂಟ್ ನಂಬರ್ ಕಾರ್ಡ್)ನ್ನು ಆದಾಯ ತೆರಿಗೆ ಇಲಾಖೆ ನೀಡುತ್ತಿದೆ. ಆದರೆ, ಆದಾಯ ತೆರಿಗೆ ಇಲಾಖೆಯ ಮಹಾ ಯಡವಟ್ಟಿನಿಂದ ಇಬ್ಬರಿಗೆ ಒಂದೇ ನಂಬರ್ ನ ಪ್ಯಾನಕಾರ್ಡ್ ಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಅವಳಿ ಸಹೊದರರಾದ ಹಸನಸಾಬ್, ಹುಸೇನಸಾಬ್ ಎಂಬುವರಿಗೆ ಒಂದೇ ನಂಬರಿನ ಪ್ಯಾನ್ ಕಾರ್ಡ್ ಬಂದಿದೆ. ಓರ್ವ ಟ್ಯಾಕ್ಸ್ ಪೇಯರ್, ಮತ್ತೋರ್ವ ರೈತ. ಹಸನಸಾಬ್ ರೈತನಾಗಿದ್ರೆ, ಹುಸೇನಸಾಬ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಇಬ್ಬರಿಗೂ ಒಂದೇ ಸಂಖ್ಯೆ ಪ್ಯಾನಕಾರ್ಡ್ ಬಂದಿರುವುದರಿಂದ ರೈತ ಹಸನ್ಸಾಬ್ಗೆ ಸಂಕಷ್ಟ ಎದುರಾಗಿದೆ.
ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ರೈತ ಹಸನ್ ಸಾಬ್ 10 ಸಾವಿರ ಸಹಾಯಧನದ ಹಣ ಪಡೆದಿದ್ದಾರೆ. ಆದ್ರೆ ನೀವು ಆದಾಯ ತೆರಿಗೆದಾರರು ಆಗಿದ್ದೀರಿ, ಹಣ ಮರು ಪಾವತಿಸಿ ಎಂದು ಕೃಷಿ ಇಲಾಖೆಯಿಂದ ನೊಟೀಸ್ ಬಂದಿದೆ. ಹಸನ್ಸಾಬ್ಗೆ ನೊಟೀಸ್ ಬಂದಾಗಲೇ ಗೊತ್ತಾಗಿದ್ದು, ಇಬ್ಬರೂ ಸಹೋದರರಿಗೆ ಒಂದೇ ನಂಬರ್ ಪ್ಯಾನ್ ಇದೆ ಎಂಬುದು.
ಹಸನಸಾಬ್, ಹುಸೇನಸಾಬ್ ಇಬ್ಬರೂ ಅವಳಿ-ಜವಳಿಗಳು. ಇಬ್ಬರ ಸಹಿ, photo, ಆಧಾರ್ ನಂಬರ್, ದಾಖಲೆಗಳು ಬೇರೆ ಬೇರೆ ಇದ್ರೂ ಸಹ ಇಬ್ಬರಿಗೂ ಒಂದೇ ಪ್ಯಾನಕಾರ್ಡ್ ಬಂದಿರುವುದರಿಂದ ರೈತನಿಗೆ ಸಂಕಷ್ಟ ಎದುರಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel