Panchamasali reservation : 22 ರಿಂದ 29ರ ವರೆಗೆ ಬೃಹತ್ ರ್ಯಾಲಿ
ಧಾರವಾಡ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಧಾರವಾಡದಲ್ಲಿ ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯಿಂದ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, 20 ತಿಂಗಳಿಂದ ನಿರಂತರ ಚಳುವಳಿ ಮಾಡುತ್ತಾ ಬಂದಿದ್ದೇವೆ.
ಸೋದರ ಸಮಾಜಗಳು ಈಗಾಗಲೇ ಮೀಸಲಾತಿ ಪಡೆದಿವೆ. ಪಾದಯಾತ್ರೆ ನಂತರ ಹಕ್ಕೊತ್ತಾಯ ಸಹ ಮಾಡಿದ್ದೇವೆ.
ಉಪವಾಸ ಸತ್ಯಾಗ್ರಹ ಸಹ ಕೈಗೊಂಡಾಗ ಸಿಎಂ ಮೀಸಲಾತಿ ಕೊಡ್ತೀವಿ ಸತ್ಯಾಗ್ರಹ ಕೈಬಿಡಿ ಅಂದಿದ್ರು.
ಹೀಗಾಗಿ ನಾವು ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ವಿ. ಸೆಪ್ಟೆಂಬರ್ 17ರ ಒಳಗೆ ಮೀಸಲಾತಿ ಕೊಡ್ತೀವಿ ಅಂದಿದ್ರು,
ಸಾಮಾಜಿಕ ನ್ಯಾಯಕ್ಕಾಗಿ ಬಸವರಾಜ ಬೊಮ್ಮಾಯಿ ಬಹಳಷ್ಟು ಸಹಕಾರ ಕೊಟ್ಟಿದ್ರು. ಆದ್ರೆ ಬಜೆಟ್ ನಲ್ಲಿ ಸಹ ನಮ್ಮ ಬೇಡಿಕೆ ನೆರವೇರಲಿಲ್ಲ ಎಂದು ಬೇಸರ ಹೊರಹಾಕಿದರು.

ಈಗ ಅನಿವಾರ್ಯವಾಗಿ ಉಗ್ರ ಹೋರಾಟ ಮಾಡುವ ವಿಚಾರವಾಗಿ ಹಾವೇರಿಗೆ ಹೋಗಿದ್ವಿ. 8 ತಿಂಗಳ ನಂತರ ಸರ್ವೇಯವರು ಬಂದು ಸರ್ವೇ ಆರಂಭ ಮಾಡಿದ್ರು.
18 ಜಿಲ್ಲೆಗಳು ಸರ್ವೇ ಬಾಕಿ ಉಳಿದಿವೆ. 2 ತಿಂಗಳ ಅವಕಾಶ ಕೊಡಿ ಎಂದು ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಆಗಸ್ಟ್ 22ರ ಒಳಗೆ ನಮಗೆ ಸಿಹಿ ಸುದ್ದಿ ಕೊಡುವ ಭರವಸೆ ಇದೆ. ಸತ್ಯಾಗ್ರಹ ಆಗಸ್ಟ್ 22 ಕ್ಕೆ ಮುಂದೂಡಲಾಗಿದೆ.
ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಅದು ಮತ್ತೆ ಮುಂದುವರೆಯುತ್ತೆ.
ಜುಲೈ 30ಕ್ಕೆ ಮತ್ತೆ ಧಾರವಾಡ ಕಲಾಭವನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
22 ರಿಂದ 29ರ ವರೆಗೆ ಹುಬ್ಬಳ್ಳಿ ಧಾರವಾಡ ದಲ್ಲಿ ಬೃಹತ್ ರ್ಯಾಲಿ ಮೂಲಕ ಗಮನಸೆಳೆಯಲಿದ್ದೇವೆ ಎಂದು ಮಾಹಿತಿ ನೀಡಿದರು.








