ದಾವಣಗೆರೆ : ಪಾನಿಪುರಿ ಅಂಗಡಿಯವನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಪಾನಿಪುರಿ ತಿಂದ ನೂರಾರು ಜನರಿಗೆ ಇದೀಗ ಆತಂಕ ಶುರುವಾಗಿದೆ. ನಗರದ ಕೆಬಿ ಬಡಾವಣೆಯ ಲಾಯರ್ ರಸ್ತೆಯ ಪಾನಿಪುರಿ ಅಂಗಡಿಯಲ್ಲಿನ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ರಾಜಸ್ಥಾನದಿಂದ ದಾವಣಗೆರೆಗೆ ಆಗಮಿಸಿದ್ದ ಪಾನಿಪುರಿ ಅಂಗಡಿಯವನಿಗೆ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನಿಡಲಾಗಿತ್ತು. ಆದ್ರೆ ಇದಕ್ಕೆ ಕ್ಯಾರೇ ಅನ್ನದೇ ಪಾನಿಪುರಿ ಅಂಗಡಿ ತೆರೆದಿದ್ದು, ನೂರಾರು ಜನರನ್ನ ಸಂಕಷ್ಟಕ್ಕೆ ಇಲುಕಿಸಿದ್ದಾನೆ. ಕೊರೊನಾ ಪಾಸಿಟಿವ್ ಪತ್ತೆಯಾಗ್ತಿದ್ದಂತೆ ಕೆಬಿ ಬಡಾವಣೆಯ 1ನೇ ಮುಖ್ಯರಸ್ತೆಯ 4ನೇ ಕ್ರಾಸ್ ಸೀಲ್ ಡೌನ್ ಮಾಡಲಾಗಿದೆ.








