ಶೌಚಾಲಯದ ನೀರನ್ನು ಬಳಸಿ ಪಾನಿಪೂರಿ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ Panipuri toilet water
ಕೊಲ್ಲಾಪುರ, ನವೆಂಬರ್08: ಪಾನಿಪೂರಿ ಭಾರತದ ಅತ್ಯುತ್ತಮ ಬೀದಿ ಬದಿಯ ಚಾಟ್ ಆಹಾರಗಳಲ್ಲಿ ಒಂದಾಗಿದೆ. ಪ್ರತಿಯೊಂದು ಊರಲ್ಲೂ ಪಾನಿಪೂರಿ ಗಾಡಿಗಳು ಕಾಣಸಿಗುತ್ತವೆ. Panipuri toilet water

ಯಾವುದೇ ಮೂಲೆಯಲ್ಲಿ ಹೋಗಿ ನೋಡಿದರೂ ಸಾಮಾನ್ಯವಾಗಿ ಪಾನಿಪೂರಿ ಅಂಗಡಿಯಲ್ಲಿ ಜನರು ಗುಂಪು ನೆರೆದಿರುವುದನ್ನು ನೋಡುತ್ತೇವೆ. ಆದರೆ ಈ ಘಟನೆಯನ್ನು ನೀವು ಕೇಳಿದ ಬಳಿಕ ಖಂಡಿತವಾಗಿಯೂ, ಪಾನಿಪೂರಿ ತಿನ್ನುವ ಮೊದಲು 10 ಬಾರಿ ಯೋಚಿಸುವಿರಿ.
ಕೋವಿಡ್ ಸೋಂಕಿನ ನಂತರ ಚೀನಾದಲ್ಲಿ ಬ್ರೂಸೆಲೋಸಿಸ್ – 6,000 ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ
ಟಾಯ್ಲೆಟ್ ನೀರನ್ನು ಮಸಾಲೆಗಳೊಂದಿಗೆ ಬೆರೆಸಿದ್ದಕ್ಕಾಗಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಗೋಲ್ಗಪ್ಪ ಮಾರಾಟಗಾರನನ್ನು ಬಂಧಿಸಲಾಗಿದೆ. ಆತನ ಪಾನಿಪೂರಿ ತಯಾರಿಕೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ.
ಮುಂಬೈ ಕೆ ಸ್ಪೆಷಲ್ ಪಾನಿಪೂರಿ ವಾಲಾ ಎಂಬ ಹೆಸರಿನ ಈ ಬೀದಿಬದಿ ಪಾನಿಪೂರಿ ಅಂಗಡಿ ಕೊಲ್ಹಾಪುರದ ರಂಕಲಾ ಸರೋವರದ ಬಳಿ ನಿಂತಿರುತ್ತಿತ್ತು. ಈತ ತಯಾರಿಸುತ್ತಿದ್ದ ಪಾನಿಪೂರಿಯ ವಿಶಿಷ್ಟ ರುಚಿಗೆ ಮಾರುಹೋದ ಜನ ಈತನ ಅಂಗಡಿಯ ಮುಂದೆ ಮುಗಿಬಿದ್ದು ಪಾನಿಪೂರಿ ಸೇವಿಸುತ್ತಿದ್ದರು.

ಇದೀಗ ಈತ ಸಾರ್ವಜನಿಕ ಶೌಚಾಲಯದ ನೀರನ್ನು ಪಾನಿ ತಯಾರಿಕೆಗೆ ಬಳಸುತ್ತಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾನಿಪೂರಿ ನೀರಿನಲ್ಲಿ ಶೌಚಾಲಯದ ನೀರನ್ನು ತೋರಿಸುವ ವೀಡಿಯೊವನ್ನು ನೋಡಿದ ಸ್ಥಳೀಯ ಜನರು ತೀವ್ರ ಕೋಪಗೊಂಡಿದ್ದು, ಆತನ ಗಾಡಿ ಅಂಗಡಿಯನ್ನೂ ಜಖಂಗೊಳಿಸಿದ್ದಾರೆ. ಮಾತ್ರವಲ್ಲ, ಆಹಾರ ಪದಾರ್ಥಗಳನ್ನೂ ರಸ್ತೆಗೆ ಎಸೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಪಟಾಕಿ ಬ್ಯಾನ್ – ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್; ಅಸಲಿಗೆ ಯಾವುದಿದು ಹಸಿರು ಪಟಾಕಿ?https://t.co/tVs0wPf1v3
— Saaksha TV (@SaakshaTv) November 7, 2020
ಎದೆಯುರಿ ನಿವಾರಣೆಗೆ 7 ನೈಸರ್ಗಿಕ ಮನೆಮದ್ದುhttps://t.co/dvehOAVu77
— Saaksha TV (@SaakshaTv) November 7, 2020







