ಎಲ್ಲಾ ಮಾದರಿ ಕ್ರಿಕೆಟ್ ಗೆ ಪಂಕಜ್ ಸಿಂಗ್ ವಿದಾಯ
ಜೈಪುರ : ಎಲ್ಲಾ ಮಾದರಿಯ ಕ್ರಿಕೆಟ್ ಗೆ ವೇಗಿ ಪಂಕಜ್ ಸಿಂಗ್ ಅವರು ವಿದಾಯ ಹೇಳಿದ್ದಾರೆ.
ಪಂಕಜ್ ಸಿಂಗ್ ಅವರು ಭಾರತದ ಪರ ಎರಡು ಟೆಸ್ಟ್ ಮತ್ತು ಏಕೈಕ ಏಕದಿನ ಪಂದ್ಯವನ್ನಾಡಿದ್ದರು.
ಪಂಕಜ್ ಸಿಂಗ್ 2010ರಲ್ಲಿ ಸುರೇಶ್ ರೈನಾ ನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಶ್ರೀಲಂಕಾ ವಿರುದ್ಧ ಹರಾರೆಯಲ್ಲಿ ಏಕೈಕ ಏಕದಿನ ಪಂದ್ಯವಾಡಿದ್ದರು.
2014ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಇಂಗ್ಲೆಂಡ್ ನ ಸೌತಂಪ್ಟನ್ ಮತ್ತು ಮ್ಯಾಂಚೆಸ್ಟರ್ ನಲ್ಲಿ ಟೆಸ್ಟ್ ಪಂದ್ಯವಾಡಿದ್ದ ಪಂಕಜ್ ಸಿಂಗ್ ಎರಡು ವಿಕೆಟ್ ಮಾತ್ರ ಪಡೆದಿದ್ದರು.
ನಂತರ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ.
ಇನ್ನು ಅವರು ಪ್ರಥಮದರ್ಜೆ ಕ್ರಿಕೆಟ್ ನಲ್ಲಿ 117 ಪಂದ್ಯವಾಡಿದ್ದು, 472 ವಿಕೆಟ್ ಪಡೆದಿದ್ದಾರೆ. 79 ಲಿಸ್ಟ್ ಎ ಕ್ರಿಕೆಟ್ ಪಂದ್ಯದಲ್ಲಿ 118 ವಿಕೆಟ್ ಪಡೆದಿದ್ದಾರೆ.









