ಟ್ವೀಟರ್ ಸಿಇಒ ಹುದ್ದೆ ವಹಿಸಿಕೊಂಡ ಭಾರತೀಯ ಮೂಲದ “ಪರಾಗ್”
ಜಾಗತಿಕ ಕಂಪನಿಗಳಲ್ಲಿ ಭಾರತೀಯರು ದೊಡ್ಡ ಹುದ್ದೆಗಳನ್ನ ಅಲಂಕರಿಸಿ ಭಾರತಕ್ಕೆ ಗೌರವ ತಂದಿದ್ದಾರೆ ಈ ಸಾಲಿಗೆ ಈಗ ಇನ್ನೊಬ್ಬ ಭಾರತೀಯ ಸೇರ್ಪಡೆಯಾಗಿದ್ದಾನೆ. ಅಮೆರಿಕಾ ಮೂಲದ ಚುಟುಕು ಸಾಮಾಜಿಕ ಜಾಲತಾಣ ಟ್ವೀಟರ್ ನ ಸಿಇಓ ಆಗಿ ಭಾರತೀಯ ಮೂಲದ ಪರಾಗ್ ಅಗರವಾಲ್ ಆಯ್ಕೆಯಾಗಿದ್ದಾರೆ. ಟ್ವೀಟರ್ ನ ಸಂಸ್ಥಾಪಕ ಮತ್ತು ಹಾಲಿ ಸಿಇಒ ಜಾಕ್ ಡೋರ್ಸಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಹಿನ್ನಲೆಯಲ್ಲಿ ಪರಾಗ್ ಅಗರವಾಲ್ ಅವರನ್ನ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ಜನಿಸಿದ ಪರಾಗ್ ಬಾಂಬೆಯ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿಯನ್ನ ಪಡೆದಿದ್ದಾರೆ. ಅಮೆರಿಕಾದ ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯದಲ್ಲಿ ಪಿಎಚ್ ಡಿ ಮಾಡಿದ್ದಾರೆ. ಮೈಕ್ರೋ ಸಾಫ್ಟ್ ಎಟಿಟಿ ಯಾಹೂ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಪಡೆದಿದ್ದಾರೆ. ಹೊಸ ಹುದ್ದೆ ವಹಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿರುವ ಪರಾಗ್ “ಇದು ನನಗೆ ಸಿಕ್ಕ ಗೌರವ ಇದನ್ನ ನಾನು ವಿನಮ್ರವಾಗಿ ಸ್ವೀಕರಿಸುತ್ತೇನೆ” ಎಂದಿದ್ದಾರೆ. ಜಾಗತಿಕ ಕಂಪನಿಗಳಲ್ಲಿ ಈಗಾಗಲೆ ಭಾರತೀಯರ ಪ್ರಾಬಲ್ಯ ಮುಂದುವರೆದಿದೆ ಮೈಕ್ರೋಸಾಫ್ಟ್ – ಸತ್ಯಾ ನಾದೆಲ್
ಗೂಗಲ್ – ಸುಂದರ್ ಪಿಚೈ
ಪೆಪ್ಸಿಕೋ – ಇಂದಿರಾ ನೂಯಿ
ಗ್ಲೋಬಲ್ ಫೌಂಡರೀಸ್ – ಸಂಜಯ್ ಝಾ
ಮಾಸ್ಟರ್ ಕಾರ್ಡ್ – ಅಜಯ್ ಪಾಲ್ ಸಿಂಗ್
ನೋಕಿಯಾ – ರಾಜಿವ್ ಸೂರಿ
ಅಡೋಬ್ – ಶಂತನು ನಾರಾಯಣ್