ಪ್ಯಾರಾಲಂಪಿಕ್ಸ್ : ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ
ಟೋಕಿಯೋ : ಪ್ಯಾರಾಲಂಪಿಕ್ಸ್ ನ ಮಹಿಳಾ ವಿಭಾಗದ 100 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತದ ಅವನಿ ಲೇಖರಾ ಇತಿಹಾಸ ಬರೆದಿದ್ದಾರೆ.
100ಮೀಟರ್ ಏರ್ ರೈಫಲ್ ಶೂಟಿಂಗ್ ಫೈನಲ್ ನಲ್ಲಿ 249.6 ಅಂಕಗಳೊಂದಿಗೆ ಅವನಿ ಲೇಖರಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದಲ್ಲದೆ ವಿಶ್ವದಾಖಲೆ ಸರಿದೂಗಿಸಿದ್ದಾರೆ.
617.7 ಅಂಕಗಳೊಂದಿಗೆ 7ನೇ ಸ್ಪರ್ಧಿಯಾಗಿ ಫೈನಲ್ ಗೆ ಲಗ್ಗೆ ಇಟ್ಟಿದ್ದ ಲೇಖರಾ, ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇವರ ಚಿನ್ನದ ಪದಕದೊಂದಿಗೆ ಭಾರತ ಈ ವರೆಗೆ 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಒಟ್ಟು 4 ಪದಕ ಗೆದ್ದಂತಾಗಿದೆ.









