ಪ್ಯಾರಾಲಿಂಪಿಕ್ಸ್ : ಮುಂದುವರೆದ ಭಾರತದ ಪದಕ ಬೇಟೆ
ಜಪಾನ್ : ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ.
ಡಿಸ್ಕಸ್ ಪಂದ್ಯದ ಎಫ್ 56 ವಿಭಾಗದಲ್ಲಿ ಯೋಗೀಶ್ ಕಥುನಿಯಾ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.
ಜಾವೆಲಿನ್ ಥ್ರೋ ಕ್ಲಾಸ್ ಎಫ್ 45ನಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಪದಕ ಗೆದ್ದರೆ ಸುಂದರ್ ಸಿಂಗ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇತ್ತ ಮಹಿಳಾ ವಿಭಾಗದ 100 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತದ ಅವನಿ ಲೇಖರಾ ಚಿನ್ನದ ಪದಕ ಗೆದ್ದಿದ್ದಾರೆ.
ಇನ್ನು ಭಾರತದ ಭಾವಿನಬೆನ್ ಪಟೇಲ್ ಅವರು ಭಾನುವಾರ ಟೇಬಲ್ ಟೆನಿಸ್ ನಲ್ಲಿ ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.
ಇದರೊಂದಿಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಈವರೆಗೆ ಭಾರತ 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಒಟ್ಟು 4 ಪದಕ ಗೆದ್ದಂತಾಗಿದೆ.