ತುಮಕೂರು: ಕೊರೊನಾದಿಂದಾಗಿ ರಾಜ್ಯದಲ್ಲೆಡೆ ಪಾರ್ಟಿ, ಮೋಜು ಮಸ್ತಿಗೆ ಬ್ರೇಕ್ ಬಿದ್ದಿದೆ. ಹೊಸ ವರ್ಷಾಚರಣೆ ಹೆಸರಸಲ್ಲಿ ಜನರು ಹೊರಗೆ ಸೇರುವುದನ್ನ ತಡೆಯಲು ಸರ್ಕಾರ ನಿಷೇಧಾಜ್ಞೆಯಂತಹ ಕಠಿಣ ಕ್ರಮಗಳನ್ನು ಕೈಗೊಂಡ ಪರಿಣಾಮ ರಾಜ್ಯದಲ್ಲಿ ಎಲ್ಲೂ ಮೋಜು-ಮಸ್ತಿ ಕಂಡು ಬರಲಿಲ್ಲ.
ಮೊದಲೇ ಹೋಟೆಲ್ಗಳಲ್ಲಿ ಬುಕ್ ಮಾಡಿಕೊಂಡವರು ಸೀಮಿತ ಜನರ ನಡುವೆ ಸೆಲಬ್ರೇಟ್ ಮಾಡಿಕೊಂಡರೇ ಬಹುತೇಕರು ಮನೆಯಲ್ಲೇ ಈ ವರ್ಷ ಹೊಸ ವರ್ಷವನ್ನ ಸ್ವಾಗತಿಸಿದ್ದು ಈ ಬಾರಿಯ ವಿಶೇಷ.
ಇದೇ ರೀತಿ, ತಮ್ಮ ಹೊಲದಲ್ಲಿ ಬೆಳೆದ ರಾಗಿಯ ರಾಶಿಗೆ ಪೂಜೆ ಸಲ್ಲಿಸುವುದರ ಮೂಲಕ ಹೊಸವರ್ಷವನ್ನು ಸ್ವಾಗತ ಮಾಡಿದ್ದಾರೆ ಕೊರಟಗೆರೆ ಶಾಸಕ ಹಾಗೂ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್. ತಮ್ಮ ಹೊಲದಲ್ಲಿ ಬೆಳೆದು ರಾಶಿಗೆ ಪತ್ನಿ ಕನ್ನಿಕಾ ಪರಮೇಶ್ವರ್ ಜತೆ ಪೂಜೆ ಸಲ್ಲಿಸಿ ಹೊಸ ವರ್ಷಾಚರಣೆ ನಡೆಸಿರುವುದು ಗಮನ ಸೆಳೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel