ನವದೆಹಲಿ : ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ನಟ ಪರೇಶ್ ರಾವಲ್ ಅವರನ್ನು ಚೇರ್ಮನ್ ಆಗಿ ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಎನ್ ಎಸ್ ಡಿ ಟ್ವೀಟ್ ಮಾಡಿದ್ದು, ಎನ್ ಎಸ್ ಡಿಯ ಹೊಸ ಚೇರ್ ಮನ್ ಆಗಿ ಪ್ರಸಿದ್ಧ ನಟ ಪದ್ಮಶ್ರೀ ಪರೇಶ್ ರಾವಲ್ ಅವರನ್ನು ಗೌರವಾನ್ವಿತ ರಾಷ್ಟ್ರಪತಿಯವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಎನ್ ಎಸ್ ಡಿ ಕುಟುಂಬ ಅವರನ್ನು ಬರಮಾಡಿಕೊಳ್ಳುತ್ತಿದೆ. ಅವರ ಮಾರ್ಗದರ್ಶನದಲ್ಲಿ ಇನ್ನಷ್ಟು ಉನ್ನತಿ ಸಾಧಿಸಲು ಎನ್ ಎಸ್ ಡಿ ಕಾರ್ಯತತ್ಪರವಾಗಲಿದೆ ಎಂದು ಬರೆದುಕೊಂಡಿದೆ.
ಪರೇಶ್ ಸಿನಿಮಾ ಜೊತೆಗೆ ರಂಗಭೂಮಿಯ ನಂಟನ್ನೂ ಹೊಂದಿದ್ದಾರೆ. ಅವರ 30ಕ್ಕೂ ಹೆಚ್ಚು ವರ್ಷಗಳ ಸಿನಿಮಾ ಪ್ರಯಾಣದಲ್ಲಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ‘ಓಹ್ ಮೈ ಗಾಡ್’ ಅವರಿಗೆ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಸಿನಿಮಾ.








