ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಿರ್ಮಾಪಕ ಕರಣ್ ಜೋಹರ್ ಇದೀಗ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಸುಶಾಂತ್ ಆತ್ಮಹತ್ಯೆ ಸುದ್ದಿ ಹೊರಬೀಳ್ತಿದ್ದಂತೆ ಬಾಲಿವುಡ್ ನ ಕೆಲ ನಿರ್ಮಾಪಕರು ಹಾಗೂ ನಟರ ವಿರುದ್ಧ ನೆಪೋಟಿಸಂ ಆರೋಪ ಕೇಳಿಬಂದಿತ್ತು. ಸ್ಟಾರ್ ಮಕ್ಕಳಿಗೆ ಮಾತ್ರ ಮಣೆ ಹಾಕಲಾಗ್ತಿದ್ದು, ಪ್ರತಿಭಾನ್ವಿತರನ್ನು ತುಳಿಯಲಾಗುತ್ತಿದೆ ಎಂಬ ಆರೋಪಗಳು ಬಾಲಿವುಡ್ ಅಂಗಳದಲ್ಲಿ ವ್ಯಾಪಕವಾಗಿ ಚರ್ಚೆಗೆ ಬಂದಿತ್ತು. ಈ ಸಾಲಿನಲ್ಲಿ ಕರಣ್ ಜೋಹರ್ ಅಗ್ರ ಸ್ತಾನದಲ್ಲಿದ್ದಾರೆ. ನಿರ್ಮಾಪಕ ಕರಣ್ ಜೋಹರ್ ವಿರುದ್ಧ ನೆಟ್ಟಿಗರು ಟ್ರೋಲ್ ಗಳ ಸುರಿಮಳೆಗಳನ್ನೇ ಸುರಿಸಿದ್ರು. ಹೀಗೆ ಹಿಗ್ಗಾಮುಗ್ಗಾ ಟ್ರೋಲ್ ಗೆ ಒಳಗಾಗಿದ್ದ ಕರಣ್ ಜೋಹರ್ ಸಾಮಾಜಿಕ ಜಾಲತಾಣಗಳಿಂದಲೇ ಕೆಲ ಕಾಲ ಕಣ್ಮರೆಯಾಗಿಬಿಟ್ಟಿದ್ರು. ಅಲ್ದೇ ಕರಣ್ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಅವರ ಆಪ್ತರೊಬ್ಬರು ಹೇಳಿಕೊಂಡಿದ್ದ ಬಗ್ಗೆಯೂ ಮಾಹಿತಿ ಸಿಕ್ಕಿದೆ.

ಆದ್ರೆ ಇದೀಗ ಕರಣ್ ಜೋಹರ್ ರಣಬೀರ್ ಕಪೂರ್ ತಾಯಿ ಹಾಗೂ ಹಿರಿಯ ನಟಿಯಾದ ನೀತು ಕಪೂರ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಫುಲ್ ಎಂಜಾಯ್ ಮಾಡ್ತಾಯಿರುವ ಫೋಟೋ ಈಗ ಮತ್ತೊಮ್ಮೆ ಟ್ರೋಲ್ ಗೆ ಒಳಗಾಗಿದೆ. ಕಪೂರ್ ಕುಟುಂಬದ ಜೊತೆ ಕರಣ್ ನಗುತ್ತಾ ಪಾರ್ಟಿಯಲ್ಲಿ ಖುಷಿಯಾಗಿರುವ ಫೋಟೋಗಳು ವೈರಲ್ ಆಗಿರೋದನ್ನ ನೋಡಿ ನಟ್ಟಿಗರು ಕರಣ್ ಜೋಹರ್ ಅವರನ್ನ ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ.








