ಇನ್ಮುಂದೆ ಆ.14 ‘ವಿಭಜನೆಯ ಭಯಾನಕ ನೆನಪಿನ ದಿನ’
ನವದೆಹಲಿ : ಇನ್ಮುಂದೆ ಆಗಸ್ಟ್ 14 ರ ದಿನವನ್ನು ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಆಚರಣೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನಾಳೆ ಸ್ವಾತಂತ್ರ್ಯ ದಿನಾಚರಣೆ ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಮೋದಿ, ಈ ದಿನ ವಿಭಜನೆಯ ನೋವನ್ನು ಮರೆಯಲು ಸಾಧ್ಯವಿಲ್ಲ.
ವಿಭಜನೆಯ ನೋವನ್ನು ಮರೆಯಲು ಸಾಧ್ಯವಿಲ್ಲ, ಲಕ್ಷಾಂತರ ಮಂದಿ ಸಹೋದರ ಸಹೋದರಿಯರು ವಿಭಜನೆಯ ವೇಳೆ ಸ್ಥಳಾಂತರಗೊಂಡಿದ್ದಾರೆ.
ದ್ವೇಷದ ಕಾರಣಕ್ಕೆ, ಹಿಂಸೆಗೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಭಜನೆಯ ವೇಳೆ ದೇಶದ ಜನತೆ ಅನುಭವಿಸಿದ ಕಷ್ಟದ ಮತ್ತು ತ್ಯಾಗಗಳನ್ನು ಸ್ಮರಿಸುವ ಸಲುವಾಗಿ ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ನೆನಪಿನ ದಿನ ಎಂದು ಆಚರಿಸಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಈ ದಿನ ಸಾಮಾಜಿಕ ವಿಭಜನೆ ಮತ್ತು ದ್ವೇಷದ ವಿಷವನ್ನು ತೆಗೆದು, ಏಕತೆಯ ಸ್ಫೂರ್ತಿಯನ್ನು ಬಲಿಷ್ಠಗೊಳಿಸೋಣ ಎಂದು ಜನರಿಗೆ ಕರೆಕೊಟ್ಟಿದ್ದಾರೆ.









