ನೇಪಾಳದಲ್ಲಿ ರಾಹುಲ್ ಗಾಂಧಿ ನೈಟ್ ಪಾರ್ಟಿ….ವೀಡಿಯೋ ವೈರಲ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇಪಾಳದಲ್ಲಿ ನೈಟ್ ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಹುಲ್ ಗಾಂಧಿ ಸದ್ಯ ನೇಪಾಳದ ಪ್ರವಾಸದಲ್ಲಿದ್ದಾರೆ. ನೇಪಾಳಿ ಪತ್ರಿಕೆ ‘ದಿ ಕಠ್ಮಂಡು ಪೋಸ್ಟ್’ ಪ್ರಕಾರ, ರಾಹುಲ್ ಗಾಂಧಿ ನೇಪಾಳದಲ್ಲಿ ತಮ್ಮ ಸ್ನೇಹಿತೆ ಸುಮ್ನಿಮಾ ಉದಾಸ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ಬಂದಿದ್ದಾರೆ. ಮಗಳ ಮದುವೆಗೆ ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದೆವು ಎಂದು ಸುಮ್ನಿಮಾ ತಂದೆ ಭೀಮ್ ಉದಾಸ್ ಹೇಳಿದ್ದಾರೆ.
Rahul Gandhi was at a nightclub when Mumbai was under seize. He is at a nightclub at a time when his party is exploding. He is consistent.
Interestingly, soon after the Congress refused to outsource their presidency, hit jobs have begun on their Prime Ministerial candidate… pic.twitter.com/dW9t07YkzC
— Amit Malviya (@amitmalviya) May 3, 2022
ವೈರಲ್ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ರಾಹುಲ್ ಗಾಂಧಿಯವರು ಪೂರ್ಣ ಸಮಯದ ಪ್ರವಾಸಿ ಮತ್ತು ಅರೆಕಾಲಿಕ ರಾಜಕಾರಣಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಅವರು ಪತ್ರಕರ್ತರಾಗಿರುವ ಸ್ನೇಹಿತನ ಖಾಸಗಿ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ನೇಪಾಳಕ್ಕೆ ಹೋಗಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಇನ್ನೂ ಅಪರಾಧವಾಗಿಲ್ಲ. ಬಹುಶಃ ಇಂದಿನಿಂದ ಮದುವೆಗೆ ಹಾಜರಾಗುವುದು ಕಾನೂನುಬಾಹಿರ ಮತ್ತು ಸ್ನೇಹಿತರನ್ನು ಹೊಂದುವುದು ಅಪರಾಧ ಎಂದು ಬಿಜೆಪಿ ನಿರ್ಧರಿಸಬಹುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.
ವಿಶೇಷವೆಂದರೆ ಕೆಲವೇ ಗಂಟೆಗಳ ಹಿಂದೆ, ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ಗೆ ಮೂರು ದಿನಗಳ ಅಧಿಕೃತ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ಕಾಂಗ್ರೆಸ್ ಟೀಕಿಸಿತ್ತು.








