ದೇಶಾದ್ಯಂತ ಐದು ಪಾಸ್ ಪೋರ್ಟ್ ಮೇಳ ಆಯೋಜನೆ…
ದೇಶಾದ್ಯಂತ ಮುಂದಿನ ಎರಡು ಮೂರು ವಾರಗಳಲ್ಲಿ 500 ಪಾಸ್ ಪೋರ್ಟ್ ಮೇಳಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಲೋಕಸಭೆಗಿಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಅವರು, ಕಳೆದ ಜೂನ್ ನಿಂದ ದೇಶಾದ್ಯಂತ 230 ಪಾಸ್ ಪೋರ್ಟ್ ಮೇಳಗಳನ್ನು ಆಯೋಜಿಸಲಾಗಿದೆ. ಎಲ್ಲ ಭಾರತೀಯರಿಗೆ ಪಾಸ್ ಪೋರ್ಟ್ ಲಭಿಸಬೇಕೆಂಬ ಉದ್ದೇಶದಿಂದ ಹೊಸದಾಗಿ ಮೇಳಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಪಾಸ್ ಪೋರ್ಟ್ ಕೇಂದ್ರಗಳ ಸಂಖ್ಯೆ 550ಕ್ಕೆ ಏರಿದೆ ಎಂದರು.
ದೇಶದಲ್ಲಿ ಹೊಸದಾಗಿ 157 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಸದನಕ್ಕೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಅವರು, ದೇಶದಲ್ಲಿ ಸದ್ಯ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ 94 ಸಾವಿರದಷ್ಟಿದೆ. ಸ್ನಾತಕೋತ್ತರ ಪದವಿ ಸೀಟುಗಳ ಸಂಖ್ಯೆ 64 ಸಾವಿರದಷ್ಟಿದೆ. ರಾಜ್ಯಗಳು ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಇಚ್ಛಿಸಿದರೆ ಅಗತ್ಯ ಅನುದಾನ ಒದಗಿಸಲಾಗುವುದು. ಕಾಲೇಜುಗಳ ಮೂಲ ಸೌಕರ್ಯ ಆಧರಿಸಿ ಸೀಟುಗಳ ಹೆಚ್ಚಳಕ್ಕೆ ಅನುಮತಿ ನೀಡಲಾಗುವುದು ಎಂದರು.
Passport: 500 passport fair organized across the country…








