ಕೊರೊನಾ ತಡೆಗೆ ಔಷಧಿ ಕಂಡು ಹಿಡಿಯಲು ವಿಶ್ವದಾದ್ಯಂತ ವೈದ್ಯರು, ವಿಜ್ಞಾನಿಗಳು, ಸಂಶೋಧಕರು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಏತನ್ಮಧ್ಯೆ ಆಯುರ್ವೇದ ಚಿಕಿತ್ಸೆ ಮೂಲಕ ಕೊರೊನಾ ಸೋಂಕು ಸಂಪೂರ್ಣ ಗುಣಮುಖ ಮಾಡಬಹುದು ಎಂದು ಪತಂಜಲಿ ಆಯುವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ. ಇತ್ತೀಚೆಗಷ್ಟೇ ಟ್ವಿಟ್ಟರ್ ನಲ್ಲಿ ಒಂದು ವರದಿಯನ್ನು ಬಿಡುಗಡೆ ಮಾಡಿರುವ ಆಚಾರ್ಯ ಬಾಲಕೃಷ್ಣ, ಅಶ್ವಗಂಧ, ಗಿಲೋಯ್ ಹಾಗೂ ತುಳಸಿ ಮೂಲಕ ಸಿದ್ಧಪಡಿಸಲಾದ ಔಷಧಿಯಿಂದ ಕೊರನಾ ವೈರಸ್ ಸೋಂಕಿತರನ್ನು ಸಂಪೂರ್ಣವಾಗಿ ಗುಣಮುಖ ಮಾಡಬಹುದು ಎಂದು ತಿಳಿಸಿದ್ದಾರೆ.
100 ವೈದ್ಯರು ಸತತ ಮೂರು ತಿಂಗಳ ನಡೆಸಿದ ನಿರಂತರ ಸಂಶೋಧನೆ ಬಳಿಕ ಈ ಬಗ್ಗೆ ಆಚಾರ್ಯ ಬಾಲಕೃಷ್ಣ ಸ್ಪಷ್ಟನೆ ನೀಡಿದ್ದು, ಅಶ್ವಗಂಧ, ಗಿಲೋಯ್, ತುಳಸಿ ಮತ್ತು ಸ್ವಾಸರಿ ಜ್ಯೂಸ್ ಒಳಗೊಂಡಿರುವ ಔಷಧಿ ಕೊರೊನಾ ಸೋಂಕಿಗೆ ಒಳಪಟ್ಟಿರುವ ರೋಗಿಗಳನ್ನು ಸಂಪೂರ್ಣವಾಗಿ ಗುಣಮುಖ ಮಾಡಲಿದೆ ಎಂದಿದ್ದಾರೆ.
1550 ಗುಣಹೊಂದಿರುವ ಒಟ್ಟು 150 ಆಯುರ್ವೇದ ಗಿಡಮೂಲಿಕೆಗಳನ್ನು ಸಂಶೋಧನೆಯಲ್ಲಿ ಬಳಸಲಾಗಿದೆ. ಸಂಶೋಧನಾ ವರದಿಯನ್ನು ಯುಎಸ್ ನ ವೈರಾಲಾಜಿ ವೈದ್ಯಕೀಯ ಸಂಶೋಧನಾ ಇಲಾಖೆಗೆ ಹಾಗೂ ಡಬ್ಲ್ಯೂಹೆಚ್ ಓಗೂ ಕೂಡ ನೀಡಲಾಗಿದೆ ಎಂದು ಬಾಲಕೃಷ್ಣ ಹೇಳಿದ್ದಾರೆ.