ಶಾರುಖ್ ಖಾನ್ ಕರೆ ಮಾಡಿ ಪಠಾಣ್ ಚಿತ್ರದ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ – ಅಸ್ಸಾಂ ಸಿ ಎಂ …
ಬಾಲಿವುಡ್ ನಟ ಶಾರುಖ್ ಖಾನ್ ಭಾನುವಾರ ಮುಂಜಾನೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಗುಹವಾಟಿಯಲ್ಲಿ ‘ಪಠಾನ್’ ವಿರುದ್ಧ ಪ್ರತಿಭಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರದ ವಿರುದ್ಧ ಪ್ರತಿಭಟನೆಗಳ ಬಗ್ಗೆ ತಮ್ಮ ಸರ್ಕಾರ ವಿಚಾರಣೆ ನಡೆಸುತ್ತದೆ ಮತ್ತು “ಇಂತಹ ಅಹಿತಕರ ಘಟನೆಗಳು” ಮತ್ತೆ ಮರುಕಳಿಸದಂತೆ ನೋಡಿಕೊಳ್ಳುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿಗಳು ಶಾರುಖ್ ಖಾನ್ ಗೆ ಭರವಸೆ ನೀಡಿದ್ದಾರೆ. ಗುಹವಾಟಿಯಲ್ಲಿ ಭಜರಂದಳದ ಕಾರ್ಯಕರ್ತರು ಥಿಯೇಟರ್ ಗೆ ನುಗ್ಗಿ ಚಿತ್ರದ ಪೋಸ್ಟರ್ ಗಳನ್ನ ಹರಿದು ಸುಟ್ಟು ಹಾಕಿದ್ದರು.
“ಬಾಲಿವುಡ್ ನಟ ಶಾರುಖ್ ಖಾನ್ ನನಗೆ ಕರೆ ಮಾಡಿದರು ಮತ್ತು ನಾವು ಇಂದು ಬೆಳಗಿನ ಜಾವ 2 ಗಂಟೆಗೆ ಮಾತನಾಡಿದ್ದೇವೆ. ತಮ್ಮ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ನಾವು ವಿಚಾರಿಸುತ್ತೇವೆ. ಮತ್ತು ಅಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಿ” ಎಂದು ಹಿಮವಂತ ಬಿಸ್ವಾಸ್ ಶರ್ಮಾ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಜನವರಿ 25 ರಂದು ಬಿಡುಗಡೆಯಾಗಲಿದೆ.
Pathaan – Shahrukh Khan calls and expresses concern about Pathan film protests – Assam CM…








